Thursday, June 30, 2022

Latest Posts

ಉದನೂರ ಗ್ರಾಮದಲ್ಲಿ 4.ಕೋ.87ಲ. ರೂ.ಗಳ ವಿವಿಧ ಕಾಮಗಾರಿಗೆ ಶಾಸಕ ಪಾಟೀಲ್ ಚಾಲನೆ

ಹೊಸ ದಿಗಂತ ವರದಿ, ಕಲಬುರಗಿ: 

ಕಲಬುರಗಿ ರಿಂಗ್ ರಸ್ತೆಯಿಂದ ಉದನೂರ ಗ್ರಾಮದ ವರೆಗೆ ಡಾಂಬರಿಕರಣ ರಸ್ತೆ ಕಾಮಗಾರಿ 3.ಕೋಟಿ, ಉದನೂರದಿಂದ ನಂದಿಕೂರಕ್ಕೆ ಕೂಡುವ ರಸ್ತೆ 1.ಕೋಟಿ, ಉದನೂರ ಒಳ ರಸ್ತೆಗಳ 20.ಲಕ್ಷ ಉದನೂರ ತಾಂಡಾದಲ್ಲಿ 30 ಲಕ್ಷ ಸಿಸಿ ರಸ್ತೆ ಹಾಗೂ ಸಂತ ಸೇವಾಲಾಲ್ ಭವನದ ನಿರ್ಮಾಣಕ್ಕಾಗಿ 20 ಲಕ್ಷ ಹಾಗೂ ಶಾಲೆ ಕಟಡಕ್ಕೆ ಕಾಮಗಾರಿಗೆ 17.ಲಕ್ಷ ಹಾಗೂ ವಿವಿಧ ಕಾಮಗಾರಿಗೆ ಶಾಸಕರೂ ಹಾಗೂ ಕೆಕೆಆರ್‍ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಚಾಲನೆ ನೀಡಿದರು.
ಉದನೂರನಲ್ಲಿ ಬಹಳ ದಿನದಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆ ನಿರ್ಮಾಣದಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಪಿಡಬ್ಲ್ಯೂಡಿ, ಕೆಕೆಆರ್‍ಡಿಬಿ, ಸೋಶಿಯಲ್ ವೆಲ್ಪೇರ್ ಹಾಗೂ ಕರ್ನಾಟಕ ರಾಜ್ಯ ತಾಂಡ ಅಭಿವೃದ್ಧಿ ನಿಗಮದಿಂದ ಅನುದಾನದಲ್ಲಿ ಒಟ್ಟು 4.ಕೋಟಿ 87 ಲಕ್ಷ ರೂ.ಗಳ ವಿವಿಧ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದರಿಂದ ಜನರಿಗೆ ಅನುಕೂಲವಾಗುತ್ತದೆ. ಅಲ್ಲದೆ ವಾಹನ ಸವಾರರಿಗೂ ಅನುಕೂಲವಾಗಲಿದೆ ಎಂದು ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಹೇಳಿದರು.
ಈ ಸಂದರ್ಭದಲ್ಲಿ ಶಿವರಾಜಪಾಟೀಲ ಉದನೂರ, ಶರಣಬಸಪ್ಪ ಮೂಲಗೆ, ಸಿದ್ಧಾರೂಢ ಮೂಲಗೆ, ಇಇ ಮಲ್ಲಕಾರ್ಜುನ, ಎಇಇ ಕಂಠೆಪ್ಪ, ಎಇ ಕಾಳಪ್ಪ, ಸಹಾಯಕ ಇಂಜಿನಿಯರರಾದ ನಾರಾಯಣರಾವ, ರಮೇಶ, ಮುಖಂಡರಾದ ವಿಶ್ವನಾಥ ಪಾಟೀಲ, ವಿಜಯಲಕ್ಷ್ಮಿ ಗೊಬ್ಬುರಕರ್, ಶೋಭಾ ಬಾಗೇವಾಡಿ, ಶರಣಬಸಪ್ಪ ಎಮಂಟಿ, ರವಿ ಪಾಟೀಲ, ಭೀಮಣ್ಣ ಶೇರಿಕಾರ, ಚಂದ್ರಶ್ಯಾ ಮೂಲಗೆ, ಬಲಭೀಮ ಬಿರಾದಾರ, ಶಿವಲಿಂಗಯ್ಯ ಸ್ವಾಮಿ, ಶಾಂತಕುಮಾರ ದುಧನಿ, ಮಲ್ಲು ಉದನೂರ, ಯೋಗೇಶ, ಅಂಬಾದಾಸ, ರಾಮು ಚವ್ಹಾಣ, ಹಣಮಂತ ಚವ್ಹಾಣ, ಅನೀಲ ಚವ್ಹಾಣ, ವಿಠಲ್ ಚವ್ಹಾಣ, ಅನೀಲ ರಾಠೋಡ, ಅನೀಲ ಯಳಮೇಲಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss