Monday, July 4, 2022

Latest Posts

ಉದ್ಧವ್​​ ಠಾಕ್ರೆ, ‘ನನ್ನ ಮನೆ ಇಂದು ನೆಲಸಮವಾಯಿತು, ನಿಮ್ಮ ದುರಹಂಕಾರವು ನಾಳೆ ಕೊನೆಗೊಳ್ಳಲಿದೆ’: ಕಂಗನಾ ರಣಾವತ್​

ಮುಂಬೈ: ಮನಾಲಿಯಿಂದ ಮುಂಬೈ ಏರ್​​​​ಪೋರ್ಟ್​ಗೆ ಆಗಮಿಸಿದ್ದ ನಟಿ ಕಂಗನಾ ರಣಾವತ್​ ನೇರವಾಗಿ ತಮ್ಮ ನಿವಾಸಕ್ಕೆ ತೆರಳಿದ್ದರು.ನಿವಾಸಕ್ಕೆ ತೆರಳುತ್ತಿದ್ದಂತೆ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಉದ್ಧವ್​​ ಠಾಕ್ರೆ, ‘ತುಜೇ ಕ್ಯಾ ಲಗ್ತಾ ಹೈ’ ಎಂದು ಪ್ರಶ್ನೆ ಮಾಡಿದ್ದಾರೆ. ಇದರ ಜತೆಗೆ ಮಹಾರಾಷ್ಟ್ರ ಸಿಎಂ ವಿರುದ್ಧ ಏಕವಚನದಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.”
‘ನೀವೂ ಫಿಲ್ಮ್​ ಮಾಫಿಯಾದೊಂದಿಗೆ ಕೈಜೋಡಿಸಿದ್ದೀರಿ, ನನ್ನ ಮನೆಯನ್ನು ಕೆಡವಿ ನನ್ನ ಮೇಲೆ ಸೇಡು ತೀರಿಸಿಕೊಂಡಿದ್ದೀರಾ? ನನ್ನ ಮನೆ ಇಂದು ನೆಲಸಮವಾಯಿತು. ನಿಮ್ಮ ದುರಹಂಕಾರವು ನಾಳೆ ಕೊನೆಗೊಳ್ಳಲಿದೆ’ ಎಂದಿದ್ದಾರೆ.
ಇದು ಸಮಯದ ಚಕ್ರ, ನೆನಪಿಡಿ, ಅದು ಎಂದಿಗೂ ಒಂದೇ ಆಗಿರುವುದಿಲ್ಲ. ಎಂದು 33 ವರ್ಷದ ನಟಿ ಎಚ್ಚರಿಕೆ ನೀಡಿದ್ದಾರೆ.
ಮುಂಬೈ ಮಹಾನಗರ ಪಾಲಿಕೆ ನಿಯಮಗಳನ್ನು ಉಲ್ಲಂಘಿಸಲಾಗಿದ್ದಾರೆ ಎಂದು ಕಂಗನಾ ಕಚೇರಿ ಕೆಲವೊಂದು ಕಟ್ಟಡ ನೆಲಸಮಗೊಳಿಸಲಾಗಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಕೋರ್ಟ್​ ತಡೆಯಾಜ್ಞೆ ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss