Sunday, August 14, 2022

Latest Posts

ಉದ್ಧವ್ ಠಾಕ್ರೆ ನೀವು ಎಲ್ಲವನ್ನೂ ಕಳೆದುಕೊಂಡು ಸೋತಿದ್ದೀರಿ : ಗುಡುಗಿದ ಅರ್ನಬ್ ಗೋಸ್ವಾಮಿ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ತಮ್ಮನ್ನು ಸುಳ್ಳು ಕೇಸಿನಲ್ಲಿ ಬಂಧಿಸಿದ್ದಾರೆ ಎಂದು
ಮಧ್ಯಂತರ ಜಾಮೀನು ಪಡೆದು ಬಿಡುಗಡೆ ಆಗಿರುವ ಅರ್ನಬ್ ಗೋಸ್ವಾಮಿ ಆರೋಪಿಸಿದ್ದಾರೆ.
ತಮ್ಮ ಟಿವಿ ಚಾನೆಲ್‌ನ ನ್ಯೂಸ್ ರೂಂನಿಂದ ಮಾತನಾಡಿ, ನೀವು ಎಲ್ಲ ಕಳೆದುಕೊಂಡಿದ್ದೀರಿ, ಸೋತು ಹೋಗಿದ್ದೀರಿ ಯಾವುದೋ ಹಳೆ ಕೇಸಿನಲ್ಲಿ ನನ್ನನ್ನು ಸಿಕ್ಕಿಹಾಕಿಸಿದ್ದೀರಿ. ಇಂಥ ಕೆಲಸಕ್ಕೆ ನನ್ನ ಬಳಿ ಕ್ಷಮೆ ಕೂಡ ಕೇಳಿಲ್ಲ ಎಂದಿದ್ದಾರೆ.
ನಾನು ಜೈಲಿನಲ್ಲಿದ್ದುಕೊಂಡೇ ನಮ್ಮ ವಾಹಿನಿ ಆರಂಭಿಸುತ್ತೇನೆ, ನಿಮ್ಮಿಂದ ಏನು ಮಾಡಲೂ ಆಗುವುದಿಲ್ಲ ಎಂದಿದ್ದಾರೆ. ಈ ಸಮಯ ಸಹೋದ್ಯೋಗಿಗಳು ಚಪ್ಪಾಳೆ ತಟ್ಟಿ ಅರ್ನಬ್ ಅವರನ್ನು ಬೆಂಬಲಿಸಿದ್ದಾರೆ.
ಈಗಷ್ಟೇ ಆಟ ಆರಂಭವಾಗಿದೆ, ಎಲ್ಲಾ ಭಾಷೆಗಳಲ್ಲೂ ರಿಪಬ್ಲಿಕ್ ಆರಂಭ ಮಾಡುತ್ತೇನೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss