ಉದ್ಯಮಿ ಅನಿಲ್ ಅಂಬಾನಿಗೆ ‘ಬಿಗ್’ ಶಾಕ್: 21 ದಿನಗಳಲ್ಲಿ 5,440 ಕೋ. ರೂ. ಪಾವತಿಗೆ ನ್ಯಾಯಾಲಯ ಆದೇಶ

0
217

ಮುಂಬೈ: ಉದ್ಯಮಿ ಅನಿಲ್ ಅಂಬಾನಿ ಅವರಿಗೆ ಬ್ರಿಟನ್ ನ್ಯಾಯಾಲಯ ‘ಬಿಗ್’ ಶಾಕ್ ನೀಡಿದೆ.
ಸಾಲ ಮರುಪಾವತಿಸದ ಪ್ರಕರಣದಲ್ಲಿ ಚೈನಾದ ಮೂರೂ ಬ್ಯಾಂಕ್ ಗಳಿಗೆ 21 ದಿನಗಳಲ್ಲಿ 700 ಮಿಲಿಯನ್ ಡಾಲರ್ ಪಾವತಿಸಲು ಲಂಡನ್ ನ್ಯಾಯಾಲಯ ಆದೇಶ ನೀಡಿದೆ. ಈಗಾಗಲೇ ಸಾಲ್ದಾ ಸುಳಿಯಲ್ಲಿ ಸಿಲುಕಿ ದಿವಾಳಿಯತ್ತ ಸಾಗಿರುವ ಅನಿಲ್ ಅಂಬಾನಿಗೆ ಈ ಆದೇಶ ಬಿಸಿತುಪ್ಪವಾಗಿದೆ.
ರಿಲಯಾನ್ಸ್ ಕಮ್ಯೂನಿಕೇಷನ್ ಬ್ಯಾಂಕ್ ಸಾಲಗಳಿಗಾಗಿ 2012ರಲ್ಲಿ ಅನಿಲ್ ವೈಯಿಕ್ತಿಕ ಗ್ಯಾರೆಂಟಿ ಒದಗಿಸಿದ್ದರು. ಹೀಗಾಗಿ ಅವರು ಮುಂದಿನ 21 ದಿನಳೊಳಗಾಗಿ ಈ ಹಣವನ್ನು ಪಾವತಿಸಬೇಕಿದೆ ಎಂದು ಆದೇಶದಲ್ಲಿ ಹೇಳಲಾಗಿದೆ. ಇದು ಭಾರತೀಯ ರೂಪಾಯಿಯಲ್ಲಿ 5,440 ಕೋಟಿಯಾಗಿದೆ.

LEAVE A REPLY

Please enter your comment!
Please enter your name here