ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಐಟಿ ಕಂಪನಿಗಳಲ್ಲಿ ಊಟ, ತಿಂಡಿ ಪೂರೈಸುವ ಕೆಲಸ ಕೊಡಿಸುವುದಾಗಿ ನಂಬಿಸಿ ನೂರಾರು ಜನರಿಂದ ಮುಂಗಡ ಹಣ ಪಡೆದು ಮೋಸ ಮಾಡಿದ್ದ ಮಹಿಳೆ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.
ವಂಚಕಿ ಮಹಿಳೆ ಕೆಂಪಾಪುರದ ನಂದಿನಿ. ಇವಳು ಕೊರೋನಾ, ಲಾಕ್’ಡೌನ್ ನ್ನೇ ಬಂಡವಾಳ ಮಾಡಿಕೊಂಡು, ಕೆಂಪಾಪುರದ ಜನರಿಗೆ ಮೋಸ ಮಾಡಿದ್ದಾಳೆ. ಮಾನ್ಯತಾ ಟೆಕ್ ಪಾರ್ಕ್ ಮತ್ತು ಸುತ್ತಮುತ್ತ ಕಂಪನಿಗಳಿಗೆ ಊಟ ಮತ್ತು ಕಾಪಿ ತಿಂಡಿ ಪೂರೈಕೆ ಮಾಡುವ ಕೆಲಸ ಖಾಲಿಯಿದೆ. ಅಲ್ಲಿ ಕೆಲಸ ಮಾಡುವರಿಗೆ ಪ್ರತಿ ತಿಂಗಳು ಹಣ ನೀಡುತ್ತಾರೆ ಎಂದಿದ್ದಾಳೆ.
ಅಗತ್ಯ ಇರುವವರಿಗೆ ಖಾಯಂ ಉದ್ಯೋಗ ಕೊಡಿಸುತ್ತೀನಿ. ತಪ್ಪಿದಲ್ಲಿ ವ್ಯಾಪಾರ ಮಾಡುವರಿಗೆ ಐಟಿ ಕಂಪನಿಗಳಿಗೆ ಊಟ ತಿಂಡಿ ಪೂರೈಕೆ ಮಾಡುವ ವ್ಯಾಪಾರ ಕೊಡ್ತೀನಿ, ಆದರೆ ಈ ಕೆಲಸ ಬೇಕಾದರೆ ಒಂದು ಲಕ್ಷ ರೂಪಾಯಿ ಮುಂಗಡ ಹಣ ಡೆಪಾಸಿಟ್ ಮಾಡಬೇಕು ಎಂದು ಹೇಳಿದ್ದಳು. ನಂದಿನಿ ಮಾತನ್ನು ನೂರಾರು ಜನ ನಂಬಿ ಲಕ್ಷ ಲಕ್ಷ ಹಣ ಡೆಪಾಸಿಟ್ ಮಾಡಿದ್ದಾರೆ.
ಮಾತಿನಂತೆ ಸ್ವಲ್ಪ ದಿನ ಕೆಲಸ ಕೊಡಿಸಿ ಹಣ ಪಾವತಿಸಿದ ನಂದಿನಿ ಇದೀಗ ಕೈ ಎತ್ತಿದ್ದಾಳೆ. ಹಣ ಕೇಳಲು ಹೋದರೆ ತಪ್ಪಿಸಿಕೊಂಡು ಓಡಾಡುತ್ತಿದ್ದಳು. ಹಣ ಕಟ್ಟಿದವರು ಕೆಲಸವೂ ಇಲ್ಲ, ಹಣವೂ ಇಲ್ಲದೇ ಆತಂಕದಲ್ಲಿದ್ದಾರೆ.
ಇದೀಗ ನಂದಿನಿ ವಿರುದ್ಧ ಅಮೃತಹಳ್ಳಿ ಪೊಲೀಸರಿಗೆ ದೂರು ನೀಡಿದ್ದು, ಆಕೆಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.