ಹೊಸ ದಿಗಂತ ವರದಿ, ಕೋಲಾರ:
ಉಪಚುನಾವಣೆಗಳಲ್ಲಿ ಬಿಜೆಪಿ ಗೆಲುವು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜನಪರ ಕಾರ್ಯಗಳಿಗೆ ಜನ ನೀಡಿರುವ ತೀರ್ಪು ಎಂದು ನಗರಾಭಿವೃದ್ದಿ ಪ್ರಾಧಿಕಾರಿದ ಅಧ್ಯಕ್ಷ ಓಂಶಕ್ತಿ ಚಲಪತಿ ತಿಳಿಸಿದರು.
ನಗರದ ಡೂಂಲೈಟ್ ವೃತ್ತದಲ್ಲಿ ಆರ್ಆರ್ನಗರ, ಶಿರಾದಲ್ಲಿ ಬಿಜೆಪಿ ಜಯಭೇರಿ ಹಾಗೂ ಬಿಹಾರದಲ್ಲಿ ಎನ್ಡಿಎಗೆ ಮತ್ತೆ ಜನ ಅಧಿಕಾರ ನೀಡಿರುವುದಕ್ಕಾಗಿ ನಡೆದ ಪಕ್ಷದ ವಿಜಯೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಉಪಚುನಾವಣೆಯಲ್ಲಿ ಬಿಜೆಪಿ ಸೋತರೆ ಯಡಿಯೂರಪ್ಪ ಸಿಎಂ ಕುರ್ಚಿಯಿಂದ ಇಳಿಯಬೇಕಾಗುತ್ತದೆ ಎಂದೆಲ್ಲಾ ಮಾತನಾಡುತ್ತಿದ್ದ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಈಗ ಅವರ ಸ್ಥಾನಗಳಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ಯಡಿಯೂರಪ್ಪ ಸರ್ಕಾರಕ್ಕೆ ಕಾಂಗ್ರೆಸ್ ನೀಡುವ ಸರ್ಟಿಫಿಕೇಟ್ ಅಗತ್ಯವಿಲ್ಲ, ರಾಜ್ಯದ ಜನತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಪರ ಆಡಳಿತದ ಪರ ನಿಂತಿದ್ದಾರೆ ಎಂಬುದಕ್ಕೆ ಬಿಹಾರ ಚುನಾವಣೆ ಹಾಗೂ ದೇಶಾದ್ಯಂತ ನಡೆದಿರುವ ಉಪಚುನಾವಣೆಗಳೇ ಸಾಕ್ಷಿ ಎಂದರು.
ಬಿಹಾರ ಚುನಾವಣೆಯಲ್ಲಿ ಎನ್ಡಿಎ ಅಧಿಕಾರ ಕಳೆದುಕೊಳ್ಳಲಿದೆ ಎಂದು ಹೇಳಿದ್ದ ಸಮೀಕ್ಷೆಗಳೆಲ್ಲಾ ಸುಳ್ಳಾಗಿವೆ, ಅಲ್ಲಿನ ಜನ ಮೋದಿಯವರನ್ನು ನೋಡಿ ಅಧಿಕಾರ ನೀಡಿದ್ದಾರೆ, ಅದಕ್ಕೆ ಅಲ್ಲಿ ಈ ಬಾರಿ ಬಿಜೆಪಿ ಮಾಡಿರುವ ಸಾಧನೆಯನ್ನು ಗಮನಿಸಬಹುದಾಗಿದೆ ಎಂದರು.
ವಿಜಯೋತ್ಸವದಲ್ಲಿ ಪಕ್ಷದ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಮುಖಂಡರಾದ ಅನಿಲ್ಕುಮಾರ್, ಸೂರಿ, ಸುರೇಶ್, ಗೋವಿಂದರಾಜು, ಸತೀಶ್,ರಾಜೇಶ್, ಶಶಿ, ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳಾದ ಮಮತಮ್ಮ, ರಾಜೇಶ್ವರಿಪದ್ಮ ಅಮರನಾಥ್, ಮಂಜುಳಾ, ಎಸ್.ಎಂ ಶೋಭಾರಾಣಿ, ಮಹದೇವಿ ಪಾಟೀಲ್, ಜಯಮ್ಮ ಮತ್ತಿತರರು ಭಾಗವಹಿಸಿದ್ದರು.