Friday, August 19, 2022

Latest Posts

ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣರಿಂದ ಡಾ.ಶ್ರೀ ಶಿವಕುಮಾರಸ್ವಾಮಿ ಜೈವಿಕ ವಚನ ಉದ್ಘಾಟನೆ

ತುಮಕೂರು: ಸಿದ್ಧಗಂಗ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗ್ರಾಮೀಣಾಭಿವೃದ್ಧಿ ಕೇಂದ್ರದ ಅಡಿಯಲ್ಲಿ ಪಂಡಿತನಹಳ್ಳಿಯ ಬಸದಿ
ಬೆಟ್ಟದ ಸಮೀಪ ಸ್ಥಾಪಿಸಲಾಗಿರುವ ಡಾ.ಶ್ರೀ ಶಿವಕುಮಾರಸ್ವಾಮಿ ಜೈವಿಕ ವಚನವನ್ನು ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಬುಧವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಜೈವಿಕ ತಂತ್ರಜ್ಞಾನ ಕ್ಷೇತ್ರಕ್ಕೆ ಹೇಳಿಮಾಡಿಸಿದ ವಾತಾವರಣ ವಿದ್ದು ಜಿಲ್ಲೆಯಲ್ಲಿ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿರುವ ಸಿದ್ಧ ಗಂಗಾ ಶಿಕ್ಷಣ ಸಂಸ್ಥೆ ಈ ಜೈವಿಕ ವನ ಸ್ಥಾಪಿಸುತ್ತಿರುವುದು ಉತ್ತಮ ಕೆಲಸ ಎಂದರು.
ತುಮಕೂರು ರಾಜ್ಯದ ಅಭಿವೃದ್ಧಿಯಲ್ಲೀ ಮಹತ್ತರ ಪಾತ್ರ ವಹಿಸುತ್ತಿದೇ,ಆದರೆ ನಗರದ ಸುತ್ತಲಿನ ಪ್ರದೇಶಗಳು ಅಭಿವೃದ್ಧಿಯಲ್ಲಿ ಹಿಂದುಳಿದಿವೆ, ತಂತ್ರಜ್ಞಾನಬಳಸಿಕೊಂಡು ಈ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು. ಅಭಿವೃದ್ಧಿಯಲ್ಲೀ ಸುಸ್ಥಿರತೆ ಮತ್ತು ಆರ್ಥಿಕತೆ ಇಲ್ಲದಲ್ಲಿ ಪ್ರಗತಿಗೆ ಅರ್ಥವಿಲ್ಲ ಎಂದರು.
ಜಿಲ್ಲೆಯಲ್ಲಿ ಮಾನವಸಂಪನ್ಮೂಲಕ್ಕೆ ಕೊರತೆಯಿಲ್ಲ ಆದರೆ ಅದರ ಸದುಪಯೋಗಕ್ಕೇಉತ್ತಮ ಮತ್ತು ರಚನಾತ್ಮಕ
ಯೋಜನೆಗಳನ್ನು ರೂಪಿಸಿ ಜಾರಿಗೆ ತರಲು ಇಚ್ಛಾಶಕ್ತಿ ಕೊರತೆ ಕಾಣುತ್ತಿದೆ ಎಂದರು. ಈ ಹಂತದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ದವಾಗಿದೆ ಎಂದರು.
ಜಿಲ್ಲಾ ಉಸ್ತುವಾರಿಸಚಿವ ಮಾಧುಸ್ವಾಮಿ ಜಿಲ್ಲೆಯಲ್ಲಿ ವಿಜ್ಞಾನದ ಪ್ರಯೋಗಾಲಯ, ಟೆಕ್ನಿಕಲ್ ಪಾರ್ಕ್,ಕಾಯರ್ ಪಾರ್ಕ್ ನಿರ್ಮಿಸಿಕೊಡುವಂತೆ ಮನವಿ ಮಾಡಿದರು. ಸಿದ್ಧ ಗಂಗಾ ಮಠಾಧಿಪತಿಗಳಾದ ಶ್ರೀ ಸಿದ್ಧಲಿಂಗಸ್ವಾಮಿಗಳು ,ಸಂಸದ ಬಸವರಾಜು, ಶಾಸಕ ಜ್ಯೋತಿ ಗಣೇಶ್ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!