Tuesday, June 28, 2022

Latest Posts

ಉಪ್ಪನಬೆಟಗೇರಿ ಗ್ರಾಮದ ಮೂರು ಸಾವಿರ ಮಠಕ್ಕೆ ಶಾಸಕ ಅಮೃತ ದೇಸಾಯಿ ಅವರಿಂದ ಗೋದಾನ

ಧಾರವಾಡ: ದೇಶಿಯ ಗೋವುಗಳ ಸಂಖ್ಯೆ ಕ್ಷೀಣಿಸುವ ಹೊತ್ತಿನಲ್ಲಿ ಅವುಗಳ ಲಾಲನೆ-ಪಾಲನೆಗೆ ಮುಂದಡಿ ಇಟ್ಟಿರುವ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ ಮೂರು ಸಾವಿರ ಮಠಕ್ಕೆ ಮಂಗಳವಾರ ಗೋವು ದಾನ ಮಾಡಿದರು.
ಬರುವ ದಿನಗಳಲ್ಲಿ ಉಪ್ಪಿನಬೆಟಗೇರಿ ಗ್ರಾಮದ ಮೂರು ಸಾವಿರ ವಿರಕ್ತಮಠದಲ್ಲಿ ಮುಂಬರುವ ದಿನಗಳಲ್ಲಿ ಗೋವುಗಳ ಪಾಲನೆಗೆ ಗೋಶಾಲೆ ತೆರೆಯುತ್ತಿರುವ ಹಿನ್ನಲೆ ಶಾಸಕರಾದ ದೇಸಾಯಿ ಕುಟುಂಬ ಸಮೇತರಾಗಿ ಶ್ರೀಮಠಕ್ಕೆ ಭೇಟಿನೀಡಿ ಗೋವು ದಾನ ಮಾಡಿದರು.
ಶ್ರೀಮಠದ ಪೀಠಾಧೀಶ ವಿರೂಪಾಕ್ಷ ಸ್ವಾಮೀಜಿ ಸಮ್ಮುಖದಲ್ಲಿ ಗಿರ ಮತ್ತು ಮಲ್ನಾಡು ಗಿಡ್ಡ ತಳಿಯ ಎರಡು ಗೋವಿನ ಕರುಗಳನ್ನು ದಾನವಾಗಿ ನೀಡುವ ಮೂಲಕಗೋಶಾಲೆ ಆರಂಭಕ್ಕೆ ಹಾಗೂ ಗೋವುಗಳ ರಕ್ಷಣೆಗೆ ಶಾಸಕರು ಮುನ್ನುಡಿ ಬರೆದಿದ್ದು, ಇತರರಿಗೂ ಮಾದರಿಯಾಗಿದೆ.
ಈ ಸಂದರ್ಭದಲ್ಲಿ ಮುಖಂಡರಾದ ತವನಪ್ಪ ಅಷ್ಟಗಿ, ಶಂಕರ ಮುಗದ, ಮಹಾವೀರ ಅಷ್ಟಗಿ, ಬಾಬಣ್ಣ ತಲವಾರ್ ಸೇರಿದಂತೆ ಗ್ರಾಮಸ್ಥರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss