Thursday, August 11, 2022

Latest Posts

ಉಪ್ಪಿನಂಗಡಿಯ ಕರಾಯ ಗ್ರಾಮದ ಪರಿಸರದಲ್ಲಿ ಮಕ್ಕಳಿoದಲೇ ತಂದೆಯ ಬರ್ಬರ ಕೊಲೆ

ಉಪ್ಪಿನಂಗಡಿ: ಮದ್ಯ ಸೇವಿಸಿ ಜಗಳವಾಡಿದ ತಂದೆಯನ್ನೇ ಮಕ್ಕಳಿಬ್ಬರು ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಮೇಲಿನ ಮುಗ್ಗದ ಆನೆಪಲ್ಲ ಎಂಬಲ್ಲಿ ಆದಿತ್ಯವಾರ ಮಧ್ಯರಾತ್ರಿ ನಡೆದಿದೆ.
ಇಲ್ಲಿನ ನಿವಾಸಿ ಧರ್ಣಪ್ಪ ಪೂಜಾರಿ ಯಾನೆ ಕೊರಗಪ್ಪ ಪೂಜಾರಿ (60) ಎಂಬವರೇ ಮಕ್ಕಳಿಂದ ಕೊಲೆಯಾದ ವ್ಯಕ್ತಿಯಾಗಿದ್ದಾರೆ. ಇವರನ್ನು ಮಕ್ಕಳಾದ ಮೋನಪ್ಪ ಪೂಜಾರಿ (34) ಹಾಗೂ ನವೀನ (30) ಎಂಬವರು ಕತ್ತಿಯಿಂದ ಹಾಗೂ ಅಡಿಕೆ ಮರದ ಸಲಕೆಯಿಂದ ಬರ್ಬರವಾಗಿ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ.
ಮೂರ್ತೆದಾರಿಕೆ ಹಾಗೂ ಕೂಲಿ ವೃತ್ತಿ ಮಾಡುತ್ತಿದ್ದ ಧರ್ಣಪ್ಪ ಪೂಜಾರಿಯವರು ಮದ್ಯ ವ್ಯಸನಿಯಾಗಿದ್ದು, ಸಮಾಜದಲ್ಲಿ ಸಜ್ಜನನೆನಿಸಿಕೊಂಡರೂ, ಕುಡಿದು ಬಂದು ಮನೆಯವರಿಗೆ ಹಿಂಸೆ ನೀಡುತ್ತಿದ್ದರೆನ್ನಲಾಗಿದೆ. ಧರ್ಣಪ್ಪ ಪೂಜಾರಿಯವರಿಗೆ ಮೂವರು ಹೆಣ್ಣುಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳಿದ್ದು ,ಬೇರೆಯೇ ವಾಸ್ತವ್ಯ ಹೊಂದಿದ್ದಾರೆ. ಧರ್ಣಪ್ಪ ಪೂಜಾರಿಯವರ ಮನೆಯ ಪಕ್ಕದಲ್ಲೇ ಅವರ ಸಹೋದರನ ಮನೆಯಿದ್ದು, ಭಾನುವಾರ ಮಧ್ಯಾಹ್ನ ಅಲ್ಲಿ ದೈವಗಳಿಗೆ ತಂಬಿಲ ಸೇವೆ ಇತ್ತು. ಆದ್ದರಿಂದ ಅದಕ್ಕೆಂದು ಇವರ ಐವರು ಮಕ್ಕಳು ತಮ್ಮ ಮನೆಗೆ ಬಂದು, ಅದರಲ್ಲಿ ಪಾಲ್ಗೊಂಡಿದ್ದರು. ಈ ಸಂಧರ್ಭದಲ್ಲಿ ಮಕ್ಕಳೊಂದಿಗೆ ಜಗಳವಾಡಿದ್ದ ಧರ್ಣಪ್ಪಪೂಜಾರಿ ಮಕ್ಕಳು ಮನೆಗೆ ಬಂದಾಗಲೂ ಜಗಳ ಕಾಯ್ದು ಕತ್ತಿಯಿಂದ ಹಲ್ಲೆನಡೆಸಲು ಮುಂದಾಗಿದ್ದರೆನ್ನಲಾಗಿದೆ. ಈ ವೇಳೆ ಹೊಕೈ ನಡೆದು ಮಕ್ಕಳು ಅದೇ ಕತ್ತಿಯಲ್ಲಿ ಇವರಿಗೆ ಕಡಿದಿದ್ದು, ಅಡಿಕೆ ಮರದ ಸಲಕೆಯಿಂದಲೂ ಹಲ್ಲೆ ನಡೆಸಿ, ಬರ್ಬರವಾಗಿ ಕೊಲೆಗೈದಿದ್ದಾರೆ. ರಾತ್ರಿ ಸುಮಾರು 11.45ರಿಂದ 12.45ರ ನಡುವೆ ಈ ಘಟನೆ ನಡೆದಿದೆ.
ಸುದ್ದಿ ತಿಳಿದು ಡಿವೈಎಸ್ಪಿ ದಿನಕರ ಶೆಟ್ಟಿ, ಪುತ್ತೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ಉಪ್ಪಿನಂಗಡಿ ಠಾಣಾ ಉಪನಿರೀಕ್ಷಕ ಈರಯ್ಯ ಹಾಗೂ ತಂಡ ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಿದ್ದು, ಮೃತರ ಪುತ್ರಿ ರಾಜೀವಿ ಎಂಬವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss