Monday, July 4, 2022

Latest Posts

ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡುಗೆ ರಾಖಿ ಕಟ್ಟಿ ಸಹೋದರತ್ವ ಮೆರೆದ ಭಾಜಪಾ ಮಹಿಳಾ ಘಟಕ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆಮಾಸ್ಕ್ ಧರಿಸಿಸಾಮಾಜಿಕ ಅಂತರ ಕಾಯ್ದುಕೊಳ್ಳಿಕೈಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿನೀವೂ ಸುರಕ್ಷಿತರಾಗಿರಿನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ ವಿಜಯನಗರ:

ವಿಶ್ವ ಪ್ರಸಿದ್ಧ ಹಂಪಿ ಹಾಗೂ ತುಂಗಭದ್ರಾ ಜಲಾಶಯ ವೀಕ್ಷಣೆಗೆ ಕುಟುಂಬ ಸಮೇತ ಆಗಮಿಸಿದ್ದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಭಾಜಪ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಶಿವಕೃಷ್ಣ ಅವರು ಭಾನುವಾರ ರಾಖಿ ಕಟ್ಟುವ ಮೂಲಕ ರಕ್ಷ ಬಂಧನ ಹಬ್ಬವನ್ನು ಆಚರಿಸಿದರು.

ಕಳೆದ ಎರಡು ದಿನಗಳ ಕಾಲ ಹಂಪಿಯ ಸ್ಮಾರಕಗಳನ್ನು ಹಾಗೂ ತುಂಗಭದ್ರಾ ಜಲಾಶಯವನ್ನು ಕಣ್ತುಂಬಿಕೊಂಡ ಭಾಜಪ ಹಿರೀಯ ನಾಯಕರಾದ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು, ಭಾನುವಾರ ವಾಯು ಪಡೆಯ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದರು. ಈ ವೇಳೆ ರಕ್ಷಾ ಬಂಧನ ಹಬ್ಬದ ನಿಮಿತ್ತ ಭಾಜಪಾ ರಾಜ್ಯ ಮಹಿಳಾ ಘಟಕದ ಪರವಾಗಿ ಶಿವಕೃಷ್ಣ ಅವರು ರಾಖಿ ಕಟ್ಟಿ ಸಹೋದರತ್ವ ಮೆರೆದು, ಆಶೀರ್ವಾದ ಪಡೆದರು. ಈ ವೇಳೆ ವೆಂಕಯ್ಯ ನಾಯ್ಡುರವರ ಆರೋಗ್ಯ ಕ್ಷೇಮ ಕುರಿತು ವಿಚಾರಿಸಿ, ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಗಣ್ಯರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss