ಪ್ರತಿ ದಿನ ಊಟದ ನಂತರ ನಾವು ನಮ್ಮ ಚಟುವಟಿಕೆಗಳಲ್ಲಿ ಮಗ್ನರಾಗಿರುತ್ತೇವೆ. ಆದರೆ ಈ ನಡುವೆ ನಾವು ಮಾಡುವ ಕಲವೊಂದು ಕಾರ್ಯವು ನಮ್ಮ ಆರೋಗ್ಯದ ಮೇಲೆ ಪರಿಣಾಮ ಭೀರುತ್ತದೆ.
ನಾವು ತೂಕ ಇಳಿಸಲು ಊಟ ಮುಗಿದ ಮೇಲೆ ಮುಂದಿನ 30 ನಿಮಿಷಗಳ ಕಾಲ ನಾವು ಮಾಡುವ ಕೆಲವೊಂದು ತಪ್ಪುಗಳು ನಮ್ಮ ಇಡೀ ಜೀವನ ಹಾಳು ಮಾಡಲಿದೆ. ಅದೇನು ತಪ್ಪು ಅಂತ ಅರಿತು ಸಾಗೋಣ…
ವಾಕಿಂಗ್: ಊಟ ಆದ ಕೂಡಲೇ ಓಡಾಡಿದರೆ ತೂಕ ಇಳೀಸಬಹುದು ಎಂದುಕೊಳ್ಳಬೇಡಿ. ಊಟದ ಬಳಿಕ ವಾಕಿಂಗ್ ಮಾಡುವುದರಿಂದ ಜೀರ್ಣ ಕ್ರಿಯೆಗೆ ತೊಂದರೆಯಾಗುತ್ತದೆ. ಆದರಿಂದ ಊಟದ ಅರ್ದ ಗಂಟೆಯ ಬಳಿಕ ವಾಕಿಂಗ್ ಮಾಡಿದರೆ ಒಳ್ಳೆಯದು.
ಟೀ ಕಾಫೀ ಕುಡಿಯುವುದು: ಮಧ್ಯಾಹ್ನ ಊಟದ ನಂತರ ಟೀ ಕಾಫಿ ಕುಡಿಯುವ ಅಭ್ಯಾಸ ಇದ್ದರೆ ಇಂದೇ ನಿಲ್ಲಿಸಿ. ಊಟ ಆದ ಬಳಿಕ ನಮ್ಮ ದೇಹದಲ್ಲಿ ಆಗುವ ಜೀರ್ಣಕ್ರಿಯೆಗೆ ಕಾಫಿ ಹಾಗೂ ಟೀ ತೊಂದರೆ ಕೊಡಲಿದ್ದು, 1 ಗಂಟೆಯ ಬಳಿಕ ನೀವು ಕಾಫಿ ಟೀ ಸೇವಿಸುವುದೇ ಉತ್ತಮ.
ಮಲಗಬೇಡಿ: ಊಟವಾದ ನಂತರ ಎಲ್ಲರಿಗೂ ನಿದ್ರೆ ಬರುವುದು ಸಹಜವಾಗಿದ್ದರೂ ಮಲಗಬೇಡಿ. ನೀವು ಸೇವಿಸುವ ಆಹಾರ ನ್ನೂ ಜೀರ್ಣವಾಗದ ಕಾರಣ ನಿದ್ದೆ ಮಾಡುವುದು ಬೇಡ. ಊಟ ಜೀರ್ಣವಾಗದ ಕಾರಣ ನಿದ್ದೆ ಮಾಡಿದರೆ ಆಹಾರ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತದೆ.
ಧರಿಸಿರುವ ಬೆಲ್ಟ್ ತೆಗಿಯಬೇಡಿ: ನೀವು ಊಟದ ಬಳಿಕ ಹೊಟ್ಟೆ ಬಾರ ಎಂಬ ಕಾರಣಕ್ಕೆ ನೀವು ಧರಿಸಿರುವ ಬೆಲ್ಟ್ ತೆಗೆಯಬೇಡಿ. ಇದರಿಂದ ನಿಮ್ಮ ಕರುಳುಗಳಿಗೆ ತೊಂದರೆಯಾಗುತ್ತದೆ.
ಹಣ್ಣು ತಿನ್ನಬೇಡಿ: ಊಟವಾದ ತಕ್ಷಣ ಹಣ್ಣು ಸೇವಿಸುವುದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ. ಹಣ್ಣಿನಲ್ಲಿ ಸಾಕಷ್ಟು ವಿಟಮಿನ್ ಅಂಶಗಳು ಹೊಂದಿದ್ದು, ಹಣ್ಣೂಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುತ್ತದೆ.
ದೂಮಪಾನ ಬೇಡ: ದೂಮಪಾನ ಸೇವನೆಯೇ ಆರೋಗ್ಯಕ್ಕೆ ಹಾನಿಕರವಾಗಿದ್ದು, ಉತ್ತಮ ಪೌಷ್ಠಿಕ ಆಹಾರ ಸೇವನೆಯ ತಕ್ಷಣ ದೂಮಪಾನ ಮಾಡುವುದು ಒಂದೇ ಬಾರಿಗೆ 10 ಸಿಗರೇಟ್ ಸೇದಿದಷ್ಟು ಪರಿಣಾಮ ಭೀರುತ್ತದೆ.
ಸ್ನಾನ ಮಾಡಬೇಡಿ: ಊಟ ಮಾಡಿದ ಕೂಡಲೆ ಸ್ನಾನ ಮಾಡುವುದು ಜೀರ್ಣಕ್ರಿಯೆ ನಿಧಾನವಾಗುವುದು. ಊಟವಾದ ಬಳಿಕ ಹೆಚ್ಚಿನ ರಕ್ತವು ಜೀರ್ಣಕ್ರಿಯೆಗೆ ಅಗತ್ಯವಿರುತ್ತದೆ. ಆದರೆ ಸ್ನಾನ ಮಾಡುವುದರಿಂದ ಚರ್ಮದ ಮೇಲೆ ಬೀಳುವ ನೀರಿನ ತಾಪಮಾನವನ್ನು ಸರಿತೂಗಿಸಲು ರಕ್ತ ಪರಿಚರ ಬದಲಾಹುತ್ತದೆ. ಇದರಿಂದ ಊಟದ ಬಳೀಕ ಸ್ನಾನ ಮಾಡುವುದು ಬೇಡ.