Monday, July 4, 2022

Latest Posts

ಊರಿಗೆ ಬರುವವರಿಗೆ ತಲಪಾಡಿ ಗಡಿಯಲ್ಲಿ ಕಿರುಕುಳ: ಪಿಣರಾಯಿ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ಆರಂಭ

ಕಾಸರಗೋಡು: ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಬೇರೆ ರಾಜ್ಯಗಳಿಂದ ಮತ್ತು ಬೇರೆ ದೇಶಗಳಿಂದ ಮನೆಗೆ ಮರಳುತ್ತಿರುವ ಕೇರಳೀಯರಿಗೆ ತಲಪ್ಪಾಡಿ ಗಡಿಯಲ್ಲಿ ವಿವಿಧ ರೀತಿಯಲ್ಲಿ ಕಿರುಕುಳ ನೀಡುತ್ತಿರುವ ರಾಜ್ಯದ ಪಿಣರಾಯಿ ವಿಜಯನ್ ಸರ್ಕಾರದ ಧೋರಣೆ ವಿರುದ್ಧ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಸೋಮವಾರದಿಂದ ಕಾಸರಗೋಡು ಕೆಎಸ್ಆರ್ ಟಿಸಿ ಬಸ್ ನಿಲ್ದಾಣ ಮತ್ತು ತಲಪ್ಪಾಡಿ ಗಡಿಯಲ್ಲಿ ಬೃಹತ್ ಪ್ರತಿಭಟನೆ ಆರಂಭಿಸಲಾಯಿತು.

ಅದರಂತೆ ಕಾಸರಗೋಡು ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಮುಂದೆ ನಡೆದ ಪ್ರತಿಭಟನೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ , ನ್ಯಾಯವಾದಿ ಕೆ.ಶ್ರೀಕಾಂತ್ ಉದ್ಘಾಟಿಸಿ ಮಾತನಾಡಿದರು. ರಾಜ್ಯದ ಎಡರಂಗ ಸರಕಾರವು ಹೊರರಾಜ್ಯ ಮತ್ತು ವಿದೇಶಗಳಲ್ಲಿರುವ ಕೇರಳೀಯರನ್ನು ಮರಳಿ ಕರೆಸಲು ಮೀನಮೇಷ ಎಣಿಸುತ್ತಿದೆ. ಈ ಮೂಲಕ ರಾಜ್ಯದ ನಾಗರಿಕರ ಬದುಕುವ ಹಕ್ಕನ್ನು ಸರ್ಕಾರವು ಕಸಿದುಕೊಂಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ತಲಪ್ಪಾಡಿ ಗಡಿಯಲ್ಲಿ ಹೊರ ರಾಜ್ಯಗಳಿಂದ ಬಂದ ಯಾರಿಗೂ ಆಹಾರ ಮತ್ತು ಕುಡಿಯುವ ನೀರು ಕೂಡ ವಿತರಿಸುವಲ್ಲಿ ಕೇರಳ ಸರ್ಕಾರವು ಮೀನಮೇಷ ಎನಿಸುತ್ತಿದೆ.

ಇದು ಸರ್ಕಾರದ ದುರ್ವರ್ತನೆ ಎಂದು ಅವರು ಖಂಡಿಸಿದರು. ಪಕ್ಷದ ಜಿಲ್ಲಾ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
ಇದೇ ವೇಳೆ ತಲಪ್ಪಾಡಿ ಗಡಿ ಪ್ರದೇಶದಲ್ಲಿ ಜರಗಿದ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss