Friday, August 12, 2022

Latest Posts

ಊರ ಉಸಾಬರಿ ಬಿಟ್ಟು ಆಸ್ಪತ್ರೆ ಬೆಡ್‌ನಲ್ಲಿ ಗಡದ್ದಾಗಿ ನಿದ್ದೆಹೋಗಿದ ಬೀದಿ ನಾಯಿ!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಬೀದಿ ನಾಯಿಯೊಂದು ಆಸ್ಪತ್ರೆಯ ಬೆಡ್‌ನಲ್ಲಿ ಬೆಚ್ಚಗೆ ಮಲಗಿಕೊಂಡ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮೂಲಗಳ ಮಾಹಿತಿ ಪ್ರಕಾರ ಇದು ಉತ್ತರಪ್ರದೇಶದ ಸಿವಿಲ್ ಲೈನ್ಸ್ ಪ್ರದೇಶದಲ್ಲಿರುವ ಆಸ್ಪತ್ರೆಯೊಂದರ ದೃಶ್ಯವಾಗಿದೆ. ಆಸ್ಪತ್ರೆಗಳ ಕುರಿತು ಅಲ್ಲಿಯ ಸಿಬ್ಬಂದಿ ಎಷ್ಟು ಕಾಳಜಿ ವಹಿಸುತ್ತಿದ್ದಾರೆ ಎನ್ನುವುದಕ್ಕೆ ಇದು ಹಿಡಿದ ಕನ್ನಡಿಯಾಗಿದೆ ಎಂದು ಸಾರ್ವಜನಿಕರು ಟೀಕಾಸ್ತ್ರ ಎಸೆಯುತ್ತಿದ್ದಾರೆ.
ಅಂದಹಾಗೆ ಈ ಬೆಡ್ ಇರುವುದು ಆಸ್ಪತ್ರೆಯ ಎರಡನೆಯ ಮಹಡಿಯಲ್ಲಿರುವ ವಾರ್ಡ್‌ನಲ್ಲಿ. ಬೀದಿನಾಯಿಯೊಂದು ಎರಡನೆಯ ಮಹಡಿ ಹತ್ತಿ ಅಲ್ಲಿರುವ ವಾರ್ಡ್ ಒಳಕ್ಕೆ ಹೋಗಿ, ಬೆಡ್ ಏರಿ ಮಲಗುವವರೆಗೂ ಆಸ್ಪತ್ರೆಯ ಸಿಬ್ಬಂದಿ ಏನು ಮಾಡುತ್ತಿದ್ದರು? ಒಂದು ವೇಳೆ ಯಾರ ಗಮನಕ್ಕೂ ಬಾರದೇ ಅದು ಒಳಗೆ ಹೋಗಿದ್ದೇ ಆಗಿದ್ದರೆ, ಒಳಗೆ ಹೋದ ಮೇಲಾದರೂ ಯಾರೂ ಗಮನಿಸಿಲ್ಲವೆ ಎನ್ನುವುದು ನೆಟ್ಟಿಗರ ಪ್ರಶ್ನೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss