ಸಾಮಾನ್ಯವಾಗಿ ಎಲ್ಲ ಮಹಿಳೆಯರಲ್ಲೂ ಋತುಚಕ್ರ ಕಾಣುತ್ತದೆ. ಪ್ರತಿ ತಿಂಗಳು ಮೂರು-ನಾಲ್ಕು ದಿನಗಳ ಕಾಲ ಮಹಿಳೆಯರಲ್ಲಿ ಮುಟ್ಟಾಗುತ್ತದೆ. ಈ ವೇಳೆ ಕೆಲ ಮಹಿಳೆಯರಿಗೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಳ್ಳುದು ಸಹಜ.
ಹೀಗಾಗಿ ಅನೇಕರು ಮಾತ್ರೆಗಳ ಮೊರೆ ಹೋಗುತ್ತಾರೆ. ಆದರೆ ಅಡುಗೆ ಮನೆಯಲ್ಲಿರುವ ಕೆಲ ಪದಾರ್ಥಗಳ ಮೂಲಕವೇ ಈ ಸಮಸ್ಯೆಯಿಂದ ಪಾರಾಗಬಹುದು. ಇದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೇ. ಮುಟ್ಟಾಗುವ ಮುಂಚೆ ಅಥವಾ ನೋವು ಕಾಣಿಸಿಕೊಳ್ಳುವಾಗ ಕರಿಎಳ್ಳನ್ನು ಪುಡಿ ಮಾಡಿ ಒಂದು ಲೋಟ ನೀರಿನಲ್ಲಿ ಹಾಕಿ ಕುಡಿಯಿರಿ. ದಿನಕ್ಕೆ ಎರಡು ಬಾರಿ ಹೀಗೆ ಸೇವಿಸಿದ್ರೆ ಮುಟ್ಟಿನ ದಿನಗಳಲ್ಲಿ ಕಂಡು ಬರುವ ನೋವು ನಿವಾರಿಸಬಹುದು. ಇದಲ್ಲದೆ ಬೆಳ್ಳುಳ್ಳಿಯನ್ನು ಕುದಿಸಿ ಕುಡಿಯುವುದರಿಂದ ಸಮಸ್ಯೆಗೆ ಪರಿಹಾರ ಕಾಣಬಹುದು. ಇದಕ್ಕಾಗಿ ನೀವು ಮೂರು-ನಾಲ್ಕು ಬೆಳ್ಳುಳ್ಳಿ ಎಸಳನ್ನು ಕತ್ತರಿಸಿ ಒಂದು ಲೋಟ ನೀರಿನಲ್ಲಿ ಚೆನ್ನಾಗಿ ಕುದಿಸಿ. ಬಳಿಕ ಈ ನೀರನ್ನು ಕುಡಿಯುವುದರಿಂದ ಋತುಚಕ್ರದ ವೇಳೆ ಕಾಣಿಸಿಕೊಳ್ಳುವ ನೋವಿಗೆ ಪರಿಹಾರ ಕಾಣಬಹುದು. ಮುಟ್ಟಿನ ಸಮಯದಲ್ಲಿ ಚಹಾ ಮತ್ತು ಕಾಫಿ ಸೇವನೆಯನ್ನು ಕಡಿಮೆ ಮಾಡಿ. ಬದಲಾಗಿ ಹಸಿರು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ. ಮುಖ್ಯವಾಗಿ ಹಾಲು, ಬಾದಾಮಿ ಸೇವನೆಗಳನ್ನು ಹೆಚ್ಚಿಸುವುದು ಉತ್ತಮ.