Tuesday, June 28, 2022

Latest Posts

ಎಂಆರ್‍ ಪಿ ದರಕ್ಕಿಂತ ಹೆಚ್ಚಿನ ದರ ವಿಧಿಸುತ್ತಿರುವ ದೂರು: ತೆರಿಗೆ ಅಧಿಕಾರಿಗಳಿಂದ ದಿಢೀರ್ ತಪಾಸಣೆ

ಶಿವಮೊಗ್ಗ: ಲಾಕ್‍ಡೌನ್ ಸಂದರ್ಭದಲ್ಲಿ ಕೆಲ ವ್ಯಾಪಾರಿಗಳು ಎಂಆರ್‍ಪಿ ದರಕ್ಕಿಂತ ಹೆಚ್ಚಿನ ದರ ವಿಧಿಸುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಗಳು ಮಂಗಳವಾರ ದಿಢೀರ್ ತಪಾಸಣೆ ನಡೆಸಿದರು.
ಸಿಮೆಂಟ್, ಸ್ಟೀಲ್, ಹಾರ್ಡ್‍ವೇರ್ ಅಂಗಡಿಗಳು, ದಿನಬಳಕೆ ಮಾರಾಟ ಅಂಗಡಿಗಳಿಗೆ ಭೇಟಿ ನೀಡಿ ಪರೀಕ್ಷಾರ್ಥ ಖರೀದಿ ನಡೆಸಿದ ಸಂದರ್ಭದಲ್ಲಿ ನಗದು ಬಿಲ್ಲು ನೀಡದೆ, ನೇರವಾಗಿ ನಗದು ಸಂಗ್ರಹಿಸಿದ ಪ್ರಕರಣಗಳಿಗೆ ಸಂಬಂಧಿಸಿ ನೊಟೀಸು ಜಾರಿ ಮಾಡಿದರು.
ಶಿವಮೊಗ್ಗ ನಗರ, ಆಯನೂರು ಹಾಗೂ ಸಾಗರ ಸುತ್ತಮುತ್ತ 10ಕ್ಕೂ ಅಧಿಕ ಮಳಿಗೆಗಳಿಗೆ ತೆರಳಿ ಅಧಿಕಾರಿಗಳು ತಪಾಸಣೆ ನಡೆಸಿದರು. ಕರ್ನಾಟಕ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ 2017 ಪ್ರಕರಣ 67(4) ಅಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು. ನಗದು ಬಿಲ್ಲು ನೀಡದ ಪ್ರಕರಣಗಳಲ್ಲಿ ಸಾರ್ವನಿಕರು ದೂರು ನೀಡಬಹುದಾಗಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ (ಜಾರಿ) ಎಚ್.ಜಿ.ಪವಿತ್ರ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss