Tuesday, July 5, 2022

Latest Posts

ಮಂಗಳೂರು| ಎಕ್ಕೂರು ಬಾಬಾ ಇನ್ನಿಲ್ಲ

ಮಂಗಳೂರು: ಎಕ್ಕೂರು ನಿವಾಸಿ ಎಕ್ಕೂರು ಬಾಬಾ ಯಾನೆ ಶುಭಕರ ಶೆಟ್ಟಿ (61) ಶುಕ್ರವಾರ ನಿಧನರಾಗಿದ್ದಾರೆ.
ನಗರದ ಖಾಸಗಿ ಮಂಗಳಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಕ್ಕೂರು ಬಾಬಾ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಇವರ ಮಾತೃಶ್ರೀಯವರು ಒಂದು ವಾರದ ಹಿಂದೆಯಷ್ಟೇ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಬಳಿಕ ಎಕ್ಕೂರು ಬಾಬಾ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಕೊರೋನಾ ಪರೀಕ್ಷೆ ನಡೆದಿದ್ದು, ವರದಿ ಪಾಸಿಟಿವ್ ಬಂದಿತ್ತು ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss