Thursday, August 11, 2022

Latest Posts

ಎಚ್ಚರ, ಭಾರತದಲ್ಲಿ ಈಗ ಪ್ರತಿ 15 ಮಂದಿಯಲ್ಲಿ ಒಬ್ಬರು ಕೊರೊನಾ ವೈರಸ್ ಸೋಂಕಿತರು!

ನವದೆಹಲಿ: ‘ಸಿರೋ’ ಭಾರತದಲ್ಲಿ ಆಘಾತಕಾರಿ ಸಮೀಕ್ಷಾ ವರದಿ ಪ್ರಕಟಿಸಿದ್ದು, ದೇಶದ ಪ್ರತೀ 15 ಮಂದಿಯಲ್ಲಿ ಒಬ್ಬರು ಕೊರೊನಾ ಸೋಂಕಿತರಿದ್ದಾರೆ ಎಂದು ಹೇಳಿದೆ.
ಭಾರತದ ಒಟ್ಟು 700 ಹಳ್ಳಿಗಳನ್ನು ಈ ಸಮೀಕ್ಷೆಗೆ ಬಳಸಿಕೊಳ್ಳಲಾಗಿದೆ. ಒಟ್ಟು 21 ರಾಜ್ಯಗಳ 70 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆದಿದೆ. ಸಮೀಕ್ಷೆಯು ಆಗಸ್ಟ್ 17 ರಿಂದ ಸೆಪ್ಟೆಂಬರ್ 22ರವರೆಗೆ ನಡೆದಿದ್ದು, ಆರೋಗ್ಯ ಸಚಿವಾಲಯವು ಮಂಗಳವಾರ ಮಧ್ಯಾಹ್ನ ಈ ವರದಿ ಬಹಿರಂಗಪಡಿಸಿದೆ.
ಭಾರತದಲ್ಲಿ 10 ವರ್ಷಕ್ಕಿಂತ ಮೇಲ್ಪಟ್ಟ 15 ರಲ್ಲಿ ಒಬ್ಬರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಅಲ್ಲದೆ ನಗರದ ಸ್ಲಂಗಳಲ್ಲಿ ಹೆಚ್ಚಿನ ಆತಂಕವಿದೆ ಎಂದು ಸಮೀಕ್ಷೆ ಹೇಳಿದೆ. ಕೊರೋನಾ ತಡೆಯಲು ಬಹಳಷ್ಟು ಎಚ್ಚರಿಕೆ ವಹಿಸುವ ಅಗತ್ಯವಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದರಿಂದ ಕೊರೊನಾ ಸೋಂಕನ್ನು ದೂರವಿಡಬಹುದಾಗಿದೆ. ಜೊತೆಗೆ ಹಬ್ಬಗಳ ಹೆಸರಿನಲ್ಲಿ ಸಾಕಷ್ಟು ಮಂದಿ ಒಟ್ಟಿಗೆ ಸೇರುವುದು, ಹಬ್ಬ ಆಚರಿಸುವುದನ್ನು ಮಾಡಬೇಡಿ, ಇದೊಂದು ವರ್ಷ ಸ್ವಲ್ಪ ಜಾಗ್ರತೆವಹಿಸಿ ಎಂದು ಕೂಡಾ ಸಮೀಕ್ಷೆ ಕಿವಿಮಾತು ಹೇಳಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss