Wednesday, June 29, 2022

Latest Posts

ಎಚ್ 1 ಬಿ ವೀಸಾ ಮರುನವೀಕರಣಕ್ಕೆ ಅಮೆರಿಕ ಗಡುವು ವಿಸ್ತರಣೆ: ಭಾರತೀಯರು ಬಚಾವ್ !

ವಾಷಿಂಗ್‌ಟನ್: ಅಮೆರಿಕದಲ್ಲಿರುವ ಎಚ್ 1 ಬಿ ವೀಸಾದಾರರು ತುಸು ನಿರಾಳರಾಗಿದ್ದಾರೆ. ವೀಸಾ ಮರುನವೀಕರಣಕ್ಕೆ ಅಮೆರಿಕ ಆಡಳಿತ, 60 ದಿನಗಳ ಕಾಲ ಗಡುವು ವಿಸ್ತರಿಸಿರುವುದರಿಂದ ಲಕ್ಷಾಂತರ ಮಂದಿ ಭಾರತೀಯರ ಮನದಲ್ಲಿ ಆಶಾಭಾವನೆ ಮೂಡಿದೆ.
ಕೊರೋನಾ ಸೋಂಕು ಪರಿಣಾಮವಾಗಿ ಅಮೆರಿಕದಲ್ಲಿ ಕಳೆದ ಮೂರು ತಿಂಗಳಿಂದ ಎಚ್ 1 ಬಿ ವೀಸಾ ಮರುನವೀಕರಣ ಹಾಗೂ ಇತರೆ ಪ್ರಕ್ರಿಯೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರಿಂದ ಸುಮಾರು 2.5 ಲಕ್ಷ ಭಾರತೀಯರ ವೀಸಾ ಅವಧಿ ಮುಂದಿನ ಜೂನ್ ತಿಂಗಳಿಗೆ ಮುಗಿಯಲಿದ್ದು ಇವರೆಲ್ಲರಲ್ಲೂ ಆತಂಕದಲ್ಲಿದ್ದಾರೆ. ಇಲ್ಲಿರುವ ಹಲವಾರು ಭಾರತೀಯ ವೈದ್ಯರು ಮತ್ತು ಎಂಜನಿಯರುಗಳು ಕಳೆದ ಮೂರು ತಿಂಗಳಿಂದಲೂ ಅತ್ತ ನೌಕರಿಯಿಲ್ಲದೆ, ಇತ್ತ ಭಾರತಕ್ಕೆ ವಾಪಸ್ ಆಗದಂತಹ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಕೊರೋನಾ ಮಾರಿಯಿಂದ ನೌಕರಿಯನ್ನು ಕಳೆದುಕೊಂಡಿರುವ ವಿದೇಶಿಯರು ಅಮೆರಿಕದಲ್ಲಿ ಹೆಚ್ಚಿನ ದಿನ ಉಳಿಯಲು ಕಾನೂನಿನಲ್ಲಿ ಅವಕಾಶ ಇಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss