spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಎಟಿಎಂಗಳಿಂದ ಲಕ್ಷಾಂತರ ರೂ. ಡ್ರಾ ಮಾಡಿ ವಂಚನೆ: ದೂರು

- Advertisement -Nitte

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಗರದ ವಿವಿಧೆಡೆ ಇರುವ ಎಟಿಎಂಗಳಿಂದ 2.24 ಲಕ್ಷ ರೂ. ಡ್ರಾ ಮಾಡಿ ವಂಚಿಸಿದ ಬಗ್ಗೆ
ಬ್ಯಾಂಕ್ ಮ್ಯಾನೇಜರ್‌ ಒಬ್ಬರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವ್ಯಕ್ತಿಯೋರ್ವ ಮೋರ್ಗನ್ ‌ಗೇಟ್, ಮಂಗಳಾದೇವಿ, ಕೊಟ್ಟಾರ, ಬಂಟ್ಸ್ ಹಾಸ್ಟೇಲ್, ಕಾರ್ ಸ್ಟ್ರೀಟ್, ಲಾಲ್‌ಭಾಗ್, ಎಂಪೈರ್ ಮಾಲ್, ಮಂಗಳಾದೇವಿ ಕಡೆಗಳಲ್ಲಿರುವ ಎಟಿಎಂನಿಂದ ಹಣ ಡ್ರಾ ಮಾಡುವಾಗ ಹಣ ಬಂದಿರಲಿಲ್ಲ ಎಂಬ ಕಾರಣ ಆನ್‌ಲೈನ್ ಕ್ಲೇಮು ಬಗ್ಗೆ ದೂರು ನೀಡಿದ್ದ. ಬ್ಯಾಂಕ್ ಮ್ಯಾನೇಜರ್ ಎಟಿಎಂಗಳ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಎಲ್ಲ ಎಟಿಎಂಗಳಲ್ಲಿ ಹಣ ಡ್ರಾ ಮಾಡಿದ್ದು, ಹಣವನ್ನು ಸ್ವೀಕರಿಸಿರುವುದು ಕಂಡು ಬಂದಿದೆ. ವ್ಯಕ್ತಿಯು ಹಣ ಮೆಷಿನ್‌ನಿಂದ ಬರುವ ಸಮಯ ಯಾವುದೋ ಅನಧಿಕೃತ ವಸ್ತುವನ್ನು ಕ್ಯಾಷ್ ಡಿಸ್ಪೆನ್ಸರಿಗೆ ಹಾಕಿ ‘ಟ್ರಾನ್ಸಾಕ್ಷನ್ ಫೇಲ್ಡ್’ ಎಂದು ಬರುವಂತೆ ಮಾಡಿ ಬ್ಯಾಂಕ್‌ಗೆ ವಂಚನೆ ನಡೆಸಿದ್ದಾನೆ ಎಂದು ದೂರು ನೀಡಲಾಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss