ಹೊಸದಿಗಂತ ವರದಿ, ತುಮಕೂರು:
ಬ್ಯಾಂಕ್ ನ ಎಟಿಎಂ ಒಡೆದು ಅದರಲ್ಲಿನ ಹಣ ದೋಚುವವರನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ತುಮಕೂರಿನಲ್ಲಿ ಕಳ್ಳರ ಗುಂಪೊಂದು ಎಟಿಎಂ ಯಂತ್ರವನ್ನೇ ಹೊತ್ತು ಕೊಂಡು ಹೋಗಿರುವ ಘಟನೆ ನಡೆದಿದೆ.
ತುಮಕೂರಿನ ಹೊರವಲಯದಲ್ಲಿ ಗ್ರಾಮಾಂತರ ಠಾಣೆಯ ಸರಹದ್ದಿನಲ್ಲೀ ಭಾನುವಾರ ತಡರಾತ್ರಿ 3ಗಂಟೆಗೆ ಸುಮಾರಿನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಹೆಗ್ಗರೆಯಲ್ಲಿ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಇಂಡಿಯನ್ ಓವರ್ಸೀಸ್ ಬ್ಯಾಂಕ್ ಎಟಿಎಂ ಯಂತ್ರವನ್ನು ಹಗ್ಗಗಳ ಸಹಾಯದಿಂದ ಹೊರಗಡೆಗೆ ಎಳೆದು ಯಾವುದೋ ವಾಹನದಲ್ಲಿ ತೆಗೆದು ಕೊಂಡು ಹೋಗಿರುವ ಕುರುಹುಗಳು ಸ್ಥಳದಲ್ಲಿ ಕಂಡು ಬಂದಿವೆ. ಎಳೆದಾಟಕ್ಕೆ ಎಟಿಎಂ ಗಾಜುಗಳು ಪುಡಿ ಪುಡಿ ಆಗಿ ಅಲ್ಲಿ ಬಿದ್ದಿದ್ದು, ಎಳೆದಾಟಕ್ಕೆ ಭೂಮಿಯ ಮೇಲೆ ಗೆರೆಗಳು ಬಿದ್ದಿವೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ಮುಖ್ಯಾ ಧಿಕಾರಿಯವರು ಮತ್ತು ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿಗಳು. ಗ್ರಾಮಾಂತರ ಠಾಣೆಯ ಪೊಲೀಸರು ಧಾವಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ ಹೆಚ್ಚಿನ ವಿವರಗಳು ತಿಳಿದು ಬರಬೇಕಿದೆ.