Thursday, August 11, 2022

Latest Posts

ಎಡಬಿಡದೆ ಸುರಿಯುತ್ತಿರುವ ಮಳೆಗೆ ನಲುಗಿದ ಶಿರಸಿ, ಉಕ್ಕಿ ಹರಿದ ನದಿಗಳು, ನದಿ ತಟದ ಕೃಷಿ ಜಮೀನು ಜಲಾವೃತ

ಶಿರಸಿ: ತಾಲೂಕಿನಾದ್ಯಂತ ಎಡಬಿಡದೆ ಸುರಿಯುತ್ತಿರುವ ಮಳೆಗೆ ಹಳ್ಳಕೊಳ್ಳಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ವರದಾ, ಘನಾಶಿನಿ, ಶಾಲ್ಮಲಾ ನದಿ ತಟದ ಕೃಷಿ ಜಮೀನು ಜಲಾವೃತವಾಗಿವೆ. ಅಬ್ಬರಿಸುತ್ತಿರುವ ಮಳೆಗೆ ವರದಾ ನದಿ ತಟದ ಕೃಷಿ ಜಮೀನುಗಳು ಜಲಾವೃತ ವಾಗಿವೆ. ಬನವಾಸಿ ಭಾಗದಲ್ಲಿ ತಗ್ಗು ಪ್ರದೇಶದ 100 ಎಕರೆಗೂ ಹೆಚ್ಚಿನ ಕೃಷಿ ಪ್ರದೇಶ ವರದಾ ನದಿ ನೀರಲ್ಲಿ ಮುಳುಗಿದೆ. ನದಿ ಪಾತ್ರದಲ್ಲಿ ಮಳೆ ಹೆಚ್ಚುತ್ತಿರುವ ಕಾರಣ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇನ್ನು ಶಾಲ್ಮಲಾ ನದಿ ಪಾತ್ರದಲ್ಲಿ ಅಡಕೆ ತೋಟಗಳಿಗೆ ನೀರು ನುಗ್ಗಿ ಹಾಕಿದ ಗೊಬ್ಬರ, ಒಣ ತರಗಲೆ ಕೊಚ್ಚಿಕೊಂಡು ಹೋಗಿ ಹಾನಿ ಸಂಭವಿಸಿದೆ. ಅತಿಯಾದ ಮಳೆಗೆ ಶಿರಸಿ-ಸಿದ್ದಾಪುರ ತಾಲೂಕುಗಳ ಗಡಿ ಭಾಗದಲ್ಲಿನ ಅಘನಾಶಿನಿ ನದಿಗಿರುವ ಸರಕುಳಿ ಸೇತುವೆ ಜಲಾವೃತಗೊಂಡಿತ್ತು. ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು. ಬಿರುಸಾದ ಗಾಳಿಗೆ ತಾಲೂಕಿನ ವಿವಿಧೆಡೆ ನೂರಾರು ಮರಗಳು ಧರೆಗುರುಳಿದ್ದು, ಮನೆಗಳು ಕುಸಿದಿವೆ. ಕೆಲವೆಡೆ ರಸ್ತೆ ಸಂಪರ್ಕ ಕಡಿತವಾಗಿದ್ದು, ಸ್ಥಳಿಕರು ತೆರವು ಕಾರ್ಯ ಮಾಡುತ್ತಿದ್ದಾರೆ.
ಮುರಿದ 167 ಕಂಬ
ಮಳೆಯ ಜತೆ ವೇಗವಾದ ಗಾಳಿ ಬೀಸುತ್ತಿರುವ ಕಾರಣ ಹೆಸ್ಕಾಂ ವ್ಯಾಪ್ತಿಯಲ್ಲಿ ೧೪೭ ವಿದ್ಯುತ್ ಕಂಬಗಳು ಧರೆಗುರುಳಿವೆ. ಜತೆ ೪ ಟ್ರಾನ್ಸ್ಫರ್ಮರ್ ಗಳಿಗೆ ಹಾನಿಯಾಗಿದೆ. ಒಟ್ಟೂ ೪೭ ಲಕ್ಷ ರೂಪಾಯಿ ನಷ್ಟ ಅಂದಾಜಿಸಲಾಗಿದೆ. ಹತ್ತಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss