Thursday, August 11, 2022

Latest Posts

ಎಡ- ಐಕ್ಯರಂಗಗಳಿಂದ ಕೇರಳದ ಅಭಿವೃದ್ಧಿ ಸಾಧ್ಯವಿಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್

ಹೊಸ ದಿಗಂತ ವರದಿ,ಎರ್ನಾಕುಳಂ:

ಎಡರಂಗ ಹಾಗೂ ಐಕ್ಯರಂಗ ಒಕ್ಕೂಟಗಳಿಂದ ಕೇರಳದ ಅಭಿವೃದ್ಧಿ ಸಾಧ್ಯವಿಲ್ಲ. ಅಲ್ಲದೆ ಜನಪರ ಮತ್ತು ಅಭಿವೃದ್ಧಿ ಪರ ಯೋಜನೆಗಳನ್ನು ಜಾರಿಗೊಳಿಸಲು ಬಿಜೆಪಿಗೆ ಮಾತ್ರ ಸಾಧ್ಯವಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಹೇಳಿದ್ದಾರೆ. ಎರ್ನಾಕುಳಂ ಜಿಲ್ಲೆಯಲ್ಲಿ ಜರಗಿದ ಬಿಜೆಪಿ ವಿಜಯ ಯಾತ್ರೆಯ ಸ್ವಾಗತ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಉಭಯ ರಂಗಗಳು ಕೇರಳವನ್ನು ಸಂಪೂರ್ಣವಾಗಿ ವಿನಾಶದತ್ತ ಕೊಂಡೊಯ್ದಿವೆ. ದೇವರ ನಾಡು ಎಂಬ ಖ್ಯಾತಿ ಪಡೆದಿರುವ ಕೇರಳಕ್ಕೆ ಈ ಎರಡು ರಂಗಗಳು ಶಾಪವಾಗಿ ಮಾರ್ಪಟ್ಟಿವೆ ಎಂದು ಕೆ.ಸುರೇಂದ್ರನ್ ಆಕ್ರೋಶದಿಂದ ನುಡಿದರು.
ಕೇರಳದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟವು ಅಧಿಕಾರಕ್ಕೆ ಬಂದರೆ ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ಅನುಷ್ಠಾನಕ್ಕೆ ತರಲಾಗುವುದು ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಲವ್ ಜಿಹಾದ್ ಬಲುದೊಡ್ಡ ಪಿಡುಗಾಗಿ ಕಾಡುತ್ತಿದೆ. ಅದರ ವಿರುದ್ಧ ಕಠಿಣ ಕಾನೂನಿನ ಅಗತ್ಯವಿದೆ ಎಂದರು. ಲವ್ ಜಿಹಾದ್ ಪಿಡುಗು ಅತೀ ದೊಡ್ಡ ರಾಜ್ಯ ಉತ್ತರ ಪ್ರದೇಶಕ್ಕಿಂತ ಕೇರಳದಲ್ಲಿ ವ್ಯಾಪಕವಾಗಿದೆ ಎಂದು ಅಂಕಿ ಅಂಶಗಳ ಸಹಿತ ವಿವರಿಸಿದರು.
ರಾಜ್ಯದಲ್ಲಿ ಹಿಂದು ಸಮಾಜದ ಜೊತೆಗೆ ಕ್ರೈಸ್ತ ಸಮುದಾಯವು ಕೂಡ ಆತಂಕಕ್ಕೊಳಗಾಗಿದ್ದು , ಲವ್ ಜಿಹಾದ್ ವಿರುದ್ಧ ಕಠಿಣ ಕ್ರಮಕ್ಕೆ ಕೋರಿದೆ. ಇದು ಅವರಿಗೆ ತೀವ್ರ ಕಳಕಳಿಯ ಸಂಗತಿಯಾಗಿದೆ ಎಂದು ಹೇಳಿದರು.
ವಿವಾಹ ಹಾಗೂ ಮೋಸದ ಮೂಲಕ ಮತಾಂತರವನ್ನು ತಡೆಯಲು ಬಿಜೆಪಿ ಆಡಳಿತದ ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಕಾನೂನನ್ನು ಜಾರಿಗೆ ತರಲಾಗಿದೆ. ಅದೇ ರೀತಿಯಲ್ಲಿ ಕೇರಳದಲ್ಲೂ ಕಾನೂನು ಕಾರ್ಯರೂಪಕ್ಕೆ ಬರಬೇಕು. ಆಗ ಮಾತ್ರ ಹಿಂದು ಮತ್ತು ಕ್ರೈಸ್ತ ಸಮುದಾಯದ ಯುವತಿಯರ ರಕ್ಷಣೆ ಸಾಧ್ಯವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಅಭಿಪ್ರಾಯಪಟ್ಟರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss