ಹೊಸದಿಗಂತ ಆನ್ಲೈನ್ ಡೆಸ್ಕ್:
ಎದೆ ಹಾಲು ಬೆಳ್ಳಗಿರೋದು ಸಾಮಾನ್ಯ. ಆದರೆ ಇಲ್ಲೊಬ್ಬ ತಾಯಿಯ ಎದೆ ಹಾಲಿನ ಬಣ್ಣ ಏಕಾಏಕಿ ಹಸಿರು ಬಣ್ಣಕ್ಕೆ ತಿರುಗಿ ವೈದ್ಯಕೀಯ ಜಗತ್ತಿನಲ್ಲಿ ಅಚ್ಚರಿ ಮೂಡಿಸಿದೆ.
ಮೆಕ್ಸಿಕೋದ ಅನ್ನಾ ಕಾರ್ಟೆಜ್ ಎಂಬ 23 ವರ್ಷದ ಮಹಿಳೆ ಇತ್ತೀಚೆಗೆ ಹೆರಿಗೆಯಾಗಿದ್ದು, ಮಗುವಿಗೆ ಹಾಲುಣಿಸಲು ಹೋದಾಗ ಎದೆ ಹಾಲಿನ ಬಣ್ಣ ಹಸಿರಾಗಿರುವುದು ಅರಿವಿಗೆ ಬಂದಿದೆ. ಗಾಬರಿಗೊಂಡ ಆಕೆ ತಕ್ಷಣ ವೈದ್ಯರಿಗೆ ಈ ವಿಚಾರ ತಿಳಿಸಿದ್ದಾಳೆ. ಸಂಶಯಗೊಂಡ ವೈದ್ಯರು ಆಕೆಯನ್ನು ಪರೀಕ್ಷೆಗೆ ಒಳಪಡಿಸಿದಾಗ, ಆಕೆಯಲ್ಲಿ ಕೋವಿಡ್ ಸೋಂಕಿರುವುದು ಪತ್ತೆಯಾಗಿದ್ದು, ತಾಯಿಯ ಹಾಲು ಕುಡಿದ ಮಗುವಿಗೂ ಕೋವಿಡ್ ಹರಡಿರುವುದು ದೃಢವಾಗಿದೆ.
ಎದೆ ಹಾಲಿನ ಬಣ್ಣ ಬದಲಾಗುವುದು ತಂಕ ಹುಟ್ಟಿಸುವಂತದ್ದೇನಲ್ಲ, ದೇಹದಲ್ಲಿ ರೋಗ ನಿರೋಧಕ ಶಕ್ತಿಗಳು ಹೆಚ್ಚಿ ಸೋಂಕುಗಳ ವಿರುದ್ಧ ಹೋರಾಡುವಾಗ ಈ ರೀತಿ ಹಾಲಿನ ಬಣ್ಣ ಬದಲಾಗುವ ಸಾಧ್ಯತೆ ಇರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.