ತಿರುವನಂತಪುರಂ: ಎನ್-95 ಮಾಸ್ಕ್ನಲ್ಲಿ ಅಕ್ರಮವಾಗಿ ಚಿನ್ನ ಸಾಗಣೆ ಮಾಡುತ್ತಿದ್ದ ವೇಳೆ ಪ್ರಯಾಣಿಕನನ್ನು ಬಂಧಿಸಿದ್ದಾರೆ.
ಕೋವಿಡ್ -೧೯ ನಿಯಮಾವಳಿಯನ್ನು ದುರಪಯೋಗಪಡಿಸಿಕೊಂಡ ಈತ ಯುಎಇಯಿಂದ ಬರುವ ವೇಳೆ ಚಿನ್ನ ಅಕ್ರಮವಾಗಿ ತಂದಿದ್ದ. ಈ ವೇಳೆ ಕಲ್ಲಿಕೋಟೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಟೆಲಿಜೆನ್ಸ್ ಯುನಿಟ್ ಸಿಬ್ಬಂದಿಗಳು ಬಂಧಿಸಿದ್ದಾರೆ .
ಆತ ಕರ್ನಾಟಕದ ಭಟ್ಕಳದವನಾಗಿದ್ದು, ದುಬೈನಿಂದ ಕೇರಳಕ್ಕೆ ಬಂದಿದ್ದು, ಸುಮಾರು 2 ಲಕ್ಷ ಬೆಲೆ ಬಾಳುವ 40 ಗ್ರಾಂ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಎಂದು ಹೇಳಲಾಗುತ್ತಿದೆ.