Friday, July 1, 2022

Latest Posts

ಎನ್ ಎಂಪಿಟಿ ಸಿಬ್ಬಂದಿಗೂ ಕೊರೋನಾ ಕಾಟ :13ಕ್ಕೂ ಅಧಿಕರಿಗೆ ಕೊರೋನಾ ಪಾಸಿಟಿವ್

ಮಂಗಳೂರು: ಇಲ್ಲಿನ ನವಮಂಗಳೂರು ಬಂದರಿನ ಸಿಬ್ಬಂದಿಗಳಿಗೂ ಕೊರೋನಾ ಬಿಸಿ ತಟ್ಟಿದೆ. ಎನ್ ಎಂಪಿಟಿಯ 13ಕ್ಕೂ ಅಧಿಕ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿದೆ.
ಬಂದರಿನ ರಿಸ್ಟಾಕರ್, ಕ್ರೇನ್ ಮತ್ತು ಅಗ್ನಿಶಾಮಕ ವಿಭಾಗದ ಸಿಬ್ಬಂದಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ.
ಇದರಿಂದಾಗಿ ಕಂಟೈನರ್ ಗಳನ್ನು ಹಡಗಿನಿಂದ ಟ್ರಕ್ ಗೆ ಲೋಡ್ ಮಾಡಲು ಸಿಬ್ಬಂದಿ ಕೊರತೆ ಎದುರಾಗಿದೆ ಎನ್ನಲಾಗಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕದವರೂ ಕ್ವಾರೆಂಟೈನ್ ಗೆ ಒಳಗಾಗುವ ಸಾಧ್ಯತೆ ಇದೆ.
ಸಿಬ್ಬಂದಿಗಳ ಕೊರತೆ ಎದುರಾದರೆ ಅಗಸ್ಟ್ ಕೊನೆಯವರೆಗೂ ಬಂದರು ನಿರ್ವಹಣೆ ಸವಾಲಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss