Wednesday, July 6, 2022

Latest Posts

ಎರಡನೇ ಮದುವೆಯಾದ ನಟ ಪ್ರಭುದೇವ್: ಸ್ಪಷ್ಟನೆಕೊಟ್ಟ ಸಹೋದರ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ನಟ, ಕೊರಿಯೋಗ್ರಾಫರ್ ಪ್ರಭುದೇವ್ ಮುಂಬೈ ಮೂಲದ ವೈದ್ಯೆ ಹಿಮಾನಿ ಅವರನ್ನು ಕಳೆದ ಮೇ ತಿಂಗಳಿನ ಲಾಕ್ ಡೌನ್ ವೇಳೆಯಲ್ಲಿ ಸರಳವಾಗಿ ವಿವಾಹವಾಗಿದ್ದಾರೆ ಎಂದು ಸಹೋದರ ರಾಜು ಸುಂದರಂ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ವರದಿ ಮಾಡಿದ್ದ ಇ-ಟೈಮ್ಸ್ ನ ಸಂದರ್ಶನವೊಂದರಲ್ಲಿ ಸಹೋದರ ರಾಜು ಸುಂದರಂ ಮಾತನಾಡಿ, ಪ್ರಭುದೇವ್, ಹಿಮಾನಿ ಅವರ ವಿವಾಹವಾಗಿದ್ದು, ಇವರ ವಿವಾಹ ನಮಗೆಲ್ಲರಿಗೂ ಅತ್ಯಂತ ಸಂತೋಷವನ್ನು ಉಂಟುಮಾಡಿದೆ ಎಂದಿದ್ದಾರೆ.
ನೃತ್ಯ ಮಾಡುವಾಗ ಪ್ರಭುದೇವ್ ಗೆ ಆಗಾಗ ಬೆನ್ನು ನೋವು ಹಾಗೂ ಕಾಲು ನೋವು ಕಾಣಿಸಿಕೊಳ್ಳುತ್ತಿದ್ದು, ಡಾ.ಹಿಮಾನಿ ಚಿಕಿತ್ಸೆ ನೀಡುತ್ತಿದ್ದರು. ಈ ಸಮಯದಲ್ಲಿ ಅವರಿಬ್ಬರ ನಡುವೆ ಪ್ರೇಮ ಹುಟ್ಟಿತ್ತು.
ನಂತರ 2 ತಿಂಗಳುಗಳ ಕಾಲ ಚೆನೈನಲ್ಲಿ ಜೊತೆಯಾಗಿ ಕಾಲ ಕಳೆದ ಇವರಿಬ್ಬರು, ಪರಸ್ಪರ ಒಪ್ಪಿಕೊಂಡು ಮದುವೆಯಾಗಿದ್ದಾರೆ ಎಂದು ವರದಿಯಾಗಿದೆ.ಸಹೋದರ ನೀಡಿರುವ ಮಾಹಿತಿ ಪ್ರಕಾರ ಮದುವೆ ಪ್ರಭುದೇವ್ ಮನೆಯಲ್ಲಿಯೇ ಆಗಿದ್ದು ಆಪ್ತರು ಮಾತ್ರ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ.
ಇದು ಪ್ರಭುದೇವ್ ಅವರ ಎರಡನೇ ಮದುವೆಯಾಗಿದ್ದು, ಮೊದಲ ಪತ್ನಿ ರಾಮಲತಾ ಸೇರಿದಂತೆ ಎರಡು ಮಕ್ಕಳಿದ್ದಾರೆ. ಹಾಗೆಯೇ ಕೆಲಕಾಲ ನಟಿ ನಯನಾ ತಾರಾ ಜೊತೆಯಲ್ಲಿಯೂ ಡೇಟಿಂಗ್ ನಡೆಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss