ದಿಗಂತ ವರದಿ ಬಾಗಲಕೋಟೆ :
ತಾಲ್ಲೂಕಿನ ಕಲಾದಗಿ ಸಮೀಪ ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಕಾರುಚಾಲಕರು ಸಾವನ್ಬಪ್ಪಿದ ಘಟನೆ ಶುಕ್ರವಾರ ನಸುಕಿನ ಜಾವ ನಡೆದಿದೆ.
ಬಾಗಲಕೋಟೆಯ ನವನಗರದ ನಿವಾಸಿ ಕಾರು ಚಾಲಕ ರಂಗಪ್ಪ ಸಾಬಣ್ಣ ಕಟ್ಟಿಮನಿ (24) , ಇನ್ನೋರ್ವ ಕಾರು ಚಾಲಕ ರಾಮದುರ್ಗ ತಾಲ್ಲೂಕಿನ ದಾಡಿವಾವಿ ತಾಂಡಾದ ಸಾಗರ ನಿಂಗಪ್ಪ ಲಮಾಣಿ ( 29) ಸಾವನ್ನಪಿದ ದುರ್ದೈವಿಗಳಾಗಿದ್ದಾರೆ.
ನಸುಕಿನ ಜಾವ ಸಂಭವಿಸಿದ ಕಾರು ಮುಖಾಮುಖಿ ಡಿಕ್ಕಿಯಲ್ಲಿ ಎರಡೂ ಕಾರುಗಳು ಚಾಲಕನ ಬದಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ