Wednesday, June 29, 2022

Latest Posts

ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನೇಹಾ ಕಕ್ಕರ್ ಮತ್ತೊಂದು ಸಿಹಿ ಸುದ್ದಿ ನೀಡ್ತಿದ್ದಾರೆ, ಯಾವ ಸುದ್ದಿ ನೋಡಿ..

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಬಾಲಿವುಡ್ ಖ್ಯಾತ ಗಾಯಕಿ ನೇಹಾ ಕಕ್ಕರ್ ಇತ್ತೀಚೆಗಷ್ಟೇ ತಮ್ಮ ವೆಡ್ಡಿಂಗ್ ಫೋಟೊಸ್ ಹಾಕಿ ಫ್ಯಾನ್ಸ್‌ಗೆ ಸಿಹಿ ಸುದ್ದಿ ನೀಡಿದ್ದರು. ಇದೀಗ ಮತ್ತೊಂದು ಸಿಹಿ ಸುದ್ದಿ ನೀಡೋಕೆ ನೇಹಾ, ರೋಹನ್‌ಪ್ರೀತ್ ರೆಡಿ ಆಗಿದ್ದಾರೆ.
ಇದಕ್ಕೆ ಪ್ರೂಫ್ ಏನು ಅಂತೀರಾ? ಈ ವಿಷಯವನ್ನು ಸ್ವತಃ ನೇಹಾ ದಂಪತಿ ಹೇಳಿಕೊಂಡಿದ್ದಾರೆ. ಬೇಬಿ ಬಂಪ್ ಕಾಣುವಂಥ ಫೋಟೊ ಒಂದನ್ನು ಹಾಕಿ ಖಯಾಲ್ ರಖಾ ಕರ್ ಎಂದು ಕ್ಯಾಪ್ಷನ್ ನೀಡಿದ್ದಾರೆ.
ನೇಹಾ ಪೋಸ್ಟ್ ಮೇಲೆ ರೋಹನ್‌ಪ್ರೀತ್ ಈಗಂತೂ ಇನ್ನೂ ಹೆಚ್ಚು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಕಮೆಂಟ್ ಮಾಡಿದ್ದಾರೆ.
ಇಬ್ಬರೂ ಈ ರೀತಿ ಸಂತಸ ಹಂಚಿಕೊಂಡಿದ್ದಾರದರೂ ಅಫಿಶಿಯಲ್ ನೇಹಾ ಗರ್ಭಿಣಿ ಎಂದು
ಹೇಳಿಕೊಂಡಿಲ್ಲ. ಅಲ್ಲದೆ ಎರಡೇ ತಿಂಗಳ ಹಿಂದೆ ಇವರ ಮದುವೆಯಾಗಿದೆ ಅಂತ ಜನ ಮೂಗು ಮೇಲೆ ಬೆರಳಿಟ್ಟುಕೊಂಡಿದ್ದಾರೆ! ಒಟ್ಟಾರೆ ಇನ್ಸ್ಟಾಗ್ರಾಂನಲ್ಲಿ ಟ್ರೆಂಡ್ ಆಗಿರುವ ಫೋಟೊಗೆ ಲೈಕ್, ಹಾರ್ಟ್‌ಗಳ ಸುರಿಮಳೆಯೇ ಬರುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss