Tuesday, June 28, 2022

Latest Posts

ಎರಡು ದಿನ ಶೋಕಾಚರಣೆ ಘೋಷಣೆ ಮೂಲಕ ಮರಾಡೋನಗೆ ಕೇರಳದ ಕಂಬನಿ

ಹೊಸದಿಗಂತ ಆನ್ ಲೈನ್ ಡೆಸ್ಕ್:

ರಾಜ್ಯದಲ್ಲಿ ಎರಡು ದಿನಗಳ ಶೋಕಾಚರಣೆ ನಡೆಸುವ ಮೂಲಕ ಬುಧವಾರ ನಿಧನರಾದ ಫುಟ್ಬಾಲ್ ದಂತಕತೆ ಮರಡೋನಾಗೆ ಕೇರಳ ಸರಕಾರ ಗೌರವ ಸಲ್ಲಿಸಿದೆ.
ಇದೊಂದು ರಾಜ್ಯದ ಇತಿಹಾಸದಲ್ಲಿಯೇ ಅಪರೂಪದ ಗೌರವ ಸೂಚಕವಾಗಿದೆ. ಮರಡೋನಾ ಸಮಾಜವಾದಿಗಳ ಜೊತೆ ನಿಂತ ಅತ್ಯುತ್ತಮ ಕ್ರೀಡಾಪಟು. ಅವರಿಗೆ ಕೇರಳ ಈ ಮೂಲಕ ಗೌರವ ಸಲ್ಲಿಸುತ್ತಿದೆ ಎಂದು ಸಲ್ಲಿಸುವ ಸಲುವಾಗಿ ಈ ನಿರ್ಧಾರ ಪ್ರಕಟಿಸಿದೆ, ಇದು ರಾಜ್ಯದ ಇತಿಹಾಸದಲ್ಲಿಯೇ ಅಪರೂಪದ ಗೌರವ ಸೂಚಕವಾಗಿದೆ. ಮರಡೋನಾ ಸಮಾಜವಾದಿಗಳ ಜೊತೆ ನಿಂತ ಅತ್ಯುತ್ತಮ ಕ್ರೀಡಾಪಟು. ಕೇರಳ ಸೇರಿದಂತೆ ಪ್ರಪಂಚಾದ್ಯಂತ ಅಭಿಮಾನಿಗಳು ಮರಡೋನಾ ಸಾವಿನಿಂದ ತೀವ್ರ ನೊಂದಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
1986ರಲ್ಲಿ ವಿಶ್ವಕಪ್ ಫುಟ್ಬಾಲ್ ಪಂದ್ಯದಲ್ಲಿ ಅರ್ಜೆಂಟೀನಾ ಗೆದ್ದ ಬಳಿಕ ಕೇರಳದಲ್ಲೂ ಮರಾಡೋನ ಅಭಿಮಾನಿಗಳು ಹುಟ್ಟಿಕೊಂಡಿದ್ದರು. ಪ್ರತೀ ವಿಶ್ವಕಪ್ ಫುಟ್ಬಾಲ್ ಪಂದ್ಯದ ವೇಳೆ ಕೇರಳದಲ್ಲಿ ಮರಡೋನಾ ಫೊಟೋಗಳು ರಾರಾಜಿಸುತ್ತಿದ್ದವು ಎಂದು ಪಿಣರಾಯ್ ವಿಜಯನ್ ನೆನಪಿಸಿಕೊಂಡಿದ್ದಾರೆ. ಮರಾಡೋನ ಸ್ಮರಣಾರ್ಥ ನ.26 ಮತ್ತು 27 ರಂದು ರಾಜ್ಯಾದ್ಯಂತ ಶೋಕಾಚರಣೆ ಆಚರಿಸಲಾಗುತ್ತಿದೆ ಎಂದು ಕೇರಳ ಕ್ರೀಡಾ ಸಚಿವ ಇಪಿ ಜಯರಾಜನ್ ತಿಳಿಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss