ಬೆಂಗಳೂರು: ವಿಜಯಪುರದ ಬಸವನ ಬಾಗೇವಾಡಿ ತಾಲೂಕಿನ ದಿಂಡವಾರ ಗ್ರಾಮದ ಬಳಿ ಎರಡು ಬೈಕ್ ಡಿಕ್ಕಿಯಾಗಿ ಮೂವರು ಮೃತಪಟ್ಟಿದ್ದಾರೆ.
ಮೃತಪಟ್ಟವರನ್ನು ಕಲಬುರಗಿ ಜಿಲ್ಲೆ ಅಫ್ಜಲಪುರ ಮೂಲದ ಕುಮಾರ ಸಂಗಪ್ಪ ಬಾಲಕುಂದಿ (22) ಹಾಗೂ ಜಿಲ್ಲೆಯ ಜಾಯವಾಡಗಿ ಗ್ರಾಮದ ಬಸವರಾಜ ಶಿವಪ್ಪ ಹಂದಿಹಾಳ (20), ಸಾಬಣ್ಣ ಶೇಖಪ್ಪ ಸಿದ್ದಾಪುರ (22) ಎಂದು ಗುರುತಿಸಲಾಗಿದೆ.
ಕಲಬುರಗಿ ಜಿಲ್ಲೆಯ ಅಫ್ಜಲಪುರ ಮೂಲದ ಬೈಕ್ ಸವಾರರು ಕೊಪ್ಪಳ ಜಿಲ್ಲೆಯ ಅಂಜನಾದ್ರ ಬೆಟ್ಟಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದಾಗ, ಜಾಯವಾಡಗಿ ಗ್ರಾಮದ ಮತ್ತಿಬ್ಬ ಬೈಕ್ ಸವಾರರು ಎದುರುಗಡೆಯಿಂದ ಬಂದಾಗ, ಮುಖಾಮುಖಿ ಬೈಕ್ ಡಿಕ್ಕಿಯಾಗಿ, ಅಪಘಾತ ಸಂಬವಿಸಿದ್ದು, ಇಬ್ಬರು ಸ್ಥಳದಲ್ಲಿಯೇ ಸಾವಿಗೀಡಾದರೆ, ಮತ್ತೋರ್ವ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಸುನೀಗಿದ್ದಾನೆ.
ಇದೇ ವೇಳೆ ಪೆಟ್ರೋಲ್ ಕೆಳ ಚೆಲ್ಲಿ, ಬೆಂಕಿ ಹೊತ್ತಿಕೊಂಡು ಎರಡು ಬೈಕ್ ಗಳು ಸುಟ್ಟು ಕರಕಲಾಗಿವೆ.
ಈ ಸಂಬಂಧ ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.