ಅನ್ನದಲ್ಲಿ ಮಾಡುವ ರುಚಿಯಾದ ತಿಂಡಿಗಳು ಯಾರಿಗೆ ತಾನೆ ಇಷ್ಟ ಆಗೋದಿಲ್ಲ ಹೇಳಿ.. ಸಕ್ಕರೆ ಕಾಯಿಲೆ ಇರುವವರಿಗಂತೂ ಅನ್ನದ ಪದಾರ್ಥ ಅಂದರೆ ಪಂಚಪ್ರಾಣ. ಆದರೆ ಚಿತ್ರಾನ, ಪಲಾವ್, ಅನ್ನ ಸಾಂಬಾರ್ ತಿಂದು ಬೇಜಾರಾಗಿದ್ದರೆ ಇಲ್ಲಿದೆ ನಿಮಗೆ ಡಿಫರೆಂಟ್ ರೆಸಿಪಿ…
‘ಕ್ಯಾಪ್ಸಿಕಮ್ ಬಾತ್’
ಬೇಕಾಗುವ ಸಾಮಾಗ್ರಿಗಳು:
ಕ್ಯಾಪ್ಸಿಕಮ್
ಈರುಳ್ಳಿ
ಕೊತ್ತಂಬರಿ
ಚಿಲ್ಲಿ ಪೌಡರ್
ವಾಂಗೀ ಬಾತ್ ಮಸಾಲ ಪುಡಿ
ಉಪ್ಪು
ಎಣ್ಣೆ
ಉದ್ದಿನಬೇಳೆ
ಕಡಲೇಬೇಳೆ
ಸಕ್ಕರೆ(ಬೇಕಾದರೆ)
ಮಾಡುವ ವಿಧಾನ:
ಒಂದು ಬಾಣಲಿಯಲ್ಲಿ ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಕಡಲೇ ಬೇಳೆ, ಈರುಳ್ಳಿ, ಕ್ಯಾಪ್ಸಿಕಮ್ ಹಾಕಿ ಚೆನ್ನಾಗಿ ಫ್ರೈ ಮಾಡಿ ತರಕಾರಿ ಚೆನ್ನಾಗಿ ಬೆoದ ನಂತರ ರುಚಿಗೆ ತಕ್ಕಷ್ಟು ಉಪ್ಪು, ವಾಂಗೀಬಾತ್ ಪುಡಿ, ಸ್ವಲ್ಪ ಚಿಲ್ಲಿ ಪೌಡರ್ ಹಾಕಿ ಫ್ರೈ ಮಾಡಿ.
ನಂತರ ಒಂದು ಪಾತ್ರೆಯಲ್ಲಿ ಬೇಯಿಸಿದ ಅನ್ನ ಹಾಕಿ ಅದಕ್ಕೆ ನೀವು ತಯಾರು ಮಾಡಿರುವ ಕ್ಯಾಪ್ಸಿಕಮ್ ಮಸಾಲೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ(ಈ ವೇಳೆ ಅಗತ್ಯವೆನಿಸಿದರೆ ಒಂದು ಚಮಚ ಸಕ್ಕರೆ ಹಾಕಬಹುದು) ಕೊತ್ತಂಬರಿ ಉದುರಿಸಿದರೆ ತಯಾರಾಗಲಿದೆ ರುಚಿ ರುಚಿಯಾದ ಕ್ಯಾಪ್ಸಿಕಂ ಬಾತ್.