Saturday, July 2, 2022

Latest Posts

ಎಲ್’ಒಸಿ ಸಮೀಪದಲ್ಲಿ ಪಾಕ್ ಫೈಟರ್ ಜೆಟ್’ನ ಅನುಮಾನಾಸ್ಪದ ಹಾರಾಟ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಜಮ್ಮು ಕಾಶ್ಮೀರದ ಗಡಿ ಭಾಗದಲ್ಲಿ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಲೇ ಇದೇ, ಇಂದು ಮತ್ತೆ ಎಲ್ ಒಸಿ ಗಡಿ ಸಮೀಪದಲ್ಲಿ ಪಾಕ್ ನ ಫೈಟರ್ ಜೆಟ್ ಕಾಣಿಸಿಕೊಂಡಿದೆ.

ನೆನ್ನೆಯಷ್ಟೆ ಗಡಿಯಲ್ಲಿ ಡ್ರೋನ್ ಹಾರಿಸಿದ ಪಾಕಿಸ್ತಾನ ಸೋಮವಾರ ಬೆಳಗ್ಗೆ ಪೂಂಚ್ ಜಿಲ್ಲೆಯ ಗಡಿಗೆ ತನ್ನ ಫೈಟರ್ ಜೆಟ್ ನನ್ನು ಕಳುಹಿಸಿದೆ.

ಭಾರತೀಯ ಸೇನೆ ಈ ಸಂಶಯಾಸ್ಪದ ಚಲನೆಯನ್ನು ಗಮಸಿದ್ದು, ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದೆ. ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡುವುದನ್ನು ನಿಷೇಧಿಸಿದ್ದಾದರೂ ಪಾಕಿಸ್ತಾನ ತನ್ನ ಉದ್ಘಟತನ ತೋರುತ್ತಿದ್ದು, ಈ ಬಗ್ಗೆ ಸೇನೆಗೆ ಸ್ಪಷ್ಟ ಮಾಹಿತಿ ಸಿಗಬೇಕಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss