Monday, August 15, 2022

Latest Posts

ಎಲ್ಲರ ಗಮನ ಸೆಳೆಯುತ್ತಿದೆ ಕೊರೋನಾ ವಿರುದ್ಧ ‘ಧನ್ವಂತರಿ ರಥ್’ನ ಹೊಸ ಮಾದರಿ ಹೋರಾಟ!

ಅಹಮದಾಬಾದ್: ಕೊರೋನಾ ವೈರಸ್ ವಿರುದ್ಧ ಗುಜರಾತ್​ನ ಅಹಮದಾಬಾದ್​ ಭಾಗದಲ್ಲಿ ಹೊಸ ಮಾದರಿಯಲ್ಲಿ ಹೋರಾಟ ಅರಂಭವಾಗಿದ್ದು, ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.
ಕೊರೋನಾ ವಿರುದ್ಧ ಜಾಗೃತಿಗಾಗಿ ‘ಧನ್ವಂತರಿ ರಥ್’ ಹೆಸರಿನಲ್ಲಿ ವಿಶೇಷ ಕೋವಿಡ್​-19 ವಾಹನಗಳನ್ನು ಅಹಮದಾಬಾದ್ ಮಹಾನಗರ ಪಾಲಿಕೆ ಸಿದ್ಧಪಡಿಸಿದೆ. ಆರಂಭಿಕ ಹಂತದಲ್ಲಿ 50 ವಾಹನಗಳನ್ನು ಸಿದ್ಧಪಡಿಸಲಾಗಿದೆ. ಈ ವಾಹನಗಳು ಅಹಮದಾಬಾದ್ ಭಾಗದಲ್ಲಿ ಸುತ್ತಾಟ ನಡೆಸಲಿದ್ದು, ನಾಗರಿಕರ ಆರೋಗ್ಯ ತಪಾಸಣೆ ​​ ಹಾಗೂ ಜನರಿಗೆ ಔಷಧ ನೀಡುವ ಕೆಲಸವನ್ನು ಇದು ಮಾಡಲಿದೆ. ಇನ್ನೂ ವಿಶೇಷವೆಂದರೆ ಪ್ರತಿ ವಾಹನಗಳಲ್ಲಿ ಓರ್ವ ಡಾಕ್ಟರ್​, ಪ್ಯಾರಾಮೆಡಿಕಲ್​ ಸ್ಟಾಪ್​ ಹಾಗೂ ಪ್ಯಾರಾಮೆಸಿಸ್ಟ್​ಗಳು ಇರುತ್ತಾರೆ. ಗುರುತಿಸಲಾದ ಸ್ಥಳದಲ್ಲಿ ಎರಡು ಗಂಟೆಗಳ ಕಾಲ ಈ ವಾಹನ ನಿಲ್ಲಲಿದೆ. ಪ್ರತಿ ವಾಹನ ನಿತ್ಯ ನಾಲ್ಕು ಪ್ರದೇಶಗಳಲ್ಲಿ ಓಡಾಟ ನಡೆಸಲಿದೆ.
ಈ ವಾಹನದಲ್ಲಿ ಆರೋಗ್ಯ ತಪಾಸಣೆಗೆ ಬರುವವರ ದೇಹದ ತಾಪಮಾನವನ್ನು ಮೊದಲು ಥರ್ಮಲ್​ ಸ್ಕ್ರೀನಿಂಗ್​ ಮೂಲಕ ಅಳೆಯಲಾಗುತ್ತದೆ. ಆರೋಗ್ಯ ಇತಿಹಾಸವನ್ನು ವೈದ್ಯರು ತಿಳಿದುಕೊಳ್ಳುತ್ತಾರೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಉದ್ದೇಶದಿಂದ ಪ್ರತಿ ರೋಗಿಗೆ ಆಯುಷ್​ ಔಷಧ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲ ಹಂತದಲ್ಲಿ ಅಹಮದಾಬಾದ್​ನ 14 ಕಂಟೇನ್​ಮೆಂಟ್​ನ 200 ಪ್ರದೇಶಗಳನ್ನು ಕವರ್ ಮಾಡಲು ನಿರ್ಧರಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss