Friday, July 1, 2022

Latest Posts

ಎಲ್ಲರ ಫೇವರೆಟ್ ಫ್ರೆಂಚ್ ಫ್ರೈಸ್ ಮಾಡುವುದು ಇಷ್ಟು ಸುಲಭವಾ? ಈ ರೆಸಿಪಿ ಫಾಲೋ ಮಾಡಿ…

ಮಕ್ಕಳ ಬಳಿ ನಿಮ್ಮ ಫೇವರೆಟ್ ಸ್ನಾಕ್ ಯಾವುದು ಎಂದು ಕೇಳಿನೋಡಿ. ಫ್ರೆಂಚ್‌ಫ್ರೈಸ್ ಹೆಸರು ಬಂದೇ ಬರುತ್ತದೆ. ಕೆಲವೊಬ್ಬರು ಇದು ಆಲೂಗಡ್ಡೆಯಿಂದ ಮಾಡುತ್ತಾರೆ. ಆರೋಗ್ಯಕ್ಕೆ ಒಳ್ಳೆಯದೇ ಎಂದು ತಿನ್ನುತ್ತಾರೆ. ಅತಿಯಾದರೆ ಯಾವುದೂ ಒಳ್ಳೆಯದಲ್ಲ ಎನ್ನುವುದು ನೆನಪಿದ್ದರೆ ಸಾಕು. ಇನ್ನು ಫ್ರೆಂಚ್ ಫ್ರೈಸ್ ನೋಡಲು ತಿನ್ನಲು ಎಲ್ಲವೂ ಚಂದ. ಬಹಳ ಈಸಿಯಾದ ಸ್ನಾಕ್ ಇದಾಗಿದ್ದು, ಕಡಿಮೆ ಸಮಯದಲ್ಲಿ ಮಾಡಬಹುದಾಗಿದೆ. ಯಾರಾದರೂ ಮನೆಗೆ ಬಂದಾಗ ಏನು ಮಾಡುವುದು ಎಂದು ಅಂದುಕೊಳ್ಳುವವರು ಈ ರೆಸಿಪಿಯನ್ನೊಮ್ಮೆ ನೋಡಿ.. ಇದು ಮಾಡಲು ಸುಲಭ, ತಿನ್ನಲು ರುಚಿಕರ..
ಇದಕ್ಕೆ ಬೇಕಾಗಿರುವ ಸಾಮಾಗ್ರಿಗಳು

  • ಆಲೂಗಡ್ಡೆ
  • ಉಪ್ಪು
  • ಚಿಲ್ಲಿ ಫ್ಲೇಕ್ಸ್
  • ಖಾರದ ಪುಡಿ
  • ಒರಿಗ್ಯಾನೊ
    ಮಾಡುವ ವಿಧಾನ
  • ಆಲೂಗಡ್ಡೆಯನ್ನು ಫ್ರೆಂಚ್ ಫ್ರೈ ಆಕಾರಕ್ಕೆ ಕತ್ತರಿಸಿಕೊಳ್ಳಿ
  • ಇದರ ಸ್ಟಾರ್ಚ್ ತೆಗೆಯಲು ತಣ್ಣನೆಯ ನೀರಿಗೆ ಹಾಕಿ ಕೆಲ ಸಮಯ ಫ್ರಿಡ್ಜ್‌ನಲ್ಲಿ ಇಟ್ಟುಬಿಡಿ
  • ಅರ್ಧ ಗಂಟೆಯ ನಂತರ ಅದನ್ನು ತೆಗೆದು ಕಾಟನ್ ಬಟ್ಟೆಯ ಮೇಲೆ ಹರವಿಡಿ
  • ನೀರಿನಂಶ ಹೋದಮೇಲೆ, ಇನ್ನೊಂದು ಬಟ್ಟಗೆ ಹಾಕಿ ಎಲ್ಲ ನೀರಿನಂಶ ಹೋಗುವಂತೆ ನೋಡಿಕೊಳ್ಳಿ.
  • ನಂತರ ಕಾದ ಎಣ್ಣೆಯಲ್ಲಿ ಆಲೂಗಡ್ಡೆ ಕರಿಯಿರಿ. ಪೂರ್ಣ ಕಂದು ಬಣ್ಣ ಬರುವುದು ಬೇಡ. ಅರ್ಧ ಬೆಂದ ನಂತರ ಅದನ್ನು ತೆಗೆಯಿರಿ.
  • ಮತ್ತೆ ಸ್ವಲ್ಪ ಸಮಯದ ನಂತರ ಮತ್ತೆ ಅದನ್ನು ಎಣ್ಣೆಗೆ ಹಾಕಿ ಸಂಪೂರ್ಣ ಕರಿಯಿರಿ. ಹೀಗೆ ಮಾಡುವುದರಿಂದ ಫ್ರೈಸ್ ಕ್ರಿಸ್ಪಿಯಾಗಿರುತ್ತದೆ.
  • ನಂತರ ಅದು ಬಿಸಿಯಾಗಿರುವಾಗಲೇ ಅದಕ್ಕೆ ಉಪ್ಪು,ಖಾರದ ಪುಡಿ, ಆರಿಗ್ಯಾನೋ,ಚಿಲ್ಲಿ ಫ್ಲೇಕ್ಸ್ ಹಾಕಿ ಮಿಕ್ಸ್‌ಮಾಡಿ ಸಾಸ್‌ನೊಂದಿಗೆ ಸವಿಯಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss