ಹೊಸ ದಿಗಂತ ಆನ್ ಲೈನ್ ಡೆಸ್ಕ್ :
ಬಿಹಾರ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು ಅದಿಕಾರದ ಚುಕ್ಕಾಣಿಯನ್ನು ಎನ್ ಡಿ ಎ ಕೂಟ ಹಿಡಿಯಿತು.ಈ ಹಿನ್ನೆಲೆ ದೆಹಲಿಯಲ್ಲಿ ಬಿಜೆಪಿ ಸಂಭ್ರಮಾಚರಣೆ ಆಚರಿಸುತ್ತಿದೆ.
ಬಿಹಾರ ಚುನಾವಣಾ ಗೆಲುವಿನ ಸಂಭ್ರಮದ ನಿಮಿತ್ತಧಾನಮಂತ್ರಿ ನರೇಂದ್ರ ಮೋದಿಯವರು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದು, ಬಿಹಾರದ ಜನತೆಗೆ ಧನ್ಯವಾದ ತಿಳಿಸಿದರು.
ಈ ಬೆಳಿಗ್ಗೆ ನಾವು ನೋಡಿದ ಫಲಿತಾಂಶಗಳ ನಂತರ, ನೀವೆಲ್ಲರೂ ಮಾಡಿದ ಕೆಲಸಕ್ಕಾಗಿ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನೀವು ಮಾಡಿದ ಕೆಲಸವನ್ನು ನಾನು ಎಷ್ಟೇ ಹೊಗಳಿದರೂ ಅದು ಕಡಿಮೆಯಾಗುತ್ತದೆ. ಮತ್ತು ಸಹಜವಾಗಿ, ನಮ್ಮ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಜಿ ಅವರ ತಂತ್ರ, ಯೋಜನೆ. ನಾವೆಲ್ಲರೂ ಇದನ್ನು ಹೇಳೋಣ: ‘ನಡ್ಡಾಜಿ, ಆಪ್ ಆಗೆ ಬಾದೋ, ಹಮ್ ಸಾಬ್ ಆಪ್ಕೆ ಸಾಥ್ ಹೈನ್’ ಎಂದು.
ಈ 21ನೇ ಶತಮಾನದಲ್ಲಿ ಅಭಿವೃದ್ಧಿಯೇ ರಾಷ್ಟ್ರ ರಾಜಕಾರಣದ ಮೂಲಮಂತ್ರ ಎಂದು ಜನರೇ ನಿರ್ಧರಿಸಿದ್ದಾರೆ. ದೇಶದ ಅಭಿವೃದ್ಧಿಗಾಗಿ ಯಾವ ಪಕ್ಷ ನಿರಂತರವಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆಯೋ, ಅದನ್ನೇ ಜನರು ಗೆಲ್ಲಿಸುತ್ತಿದ್ದಾರೆ ಎಂದು ಮೋದಿಯವರು ಹೇಳಿದರು.
ಈ ದೇಶದ ಮಹಿಳೆಯರು ಎಲ್ಲ ರೀತಿಯ ಚುನಾವಣೆಯಲ್ಲೂ ಬಿಜೆಪಿಯನ್ನು ಮೌನವಾಗಿಯೇ ಬೆಂಬಲಿಸುತ್ತಿದ್ದಾರೆ. ಉಜ್ವಲಾ ಯೋಜನೆಯಿಂದ ಹಿಡಿದು, ಗೃಹಕ್ಕೆ ಸಂಬಂಧಪಟ್ಟ ಎಲ್ಲ ಯೋಜನೆಗಳ ಫಲಾನುಭವಿಗಳು ಮಹಿಳೆಯರೇ ಆಗಿದ್ದಾರೆ. ಅವರೂ ಸಹ ಎನ್ಡಿಎಗೇ ಮತ ಹಾಕುತ್ತಿದ್ದಾರೆ. ಬಿಹಾರದ ಈ ಉಪಚುನಾವಣೆಯಲ್ಲೂ ಅದೇ ಪುನರಾವರ್ತನೆಯಾಗಿದೆ ಎಂದರು.
ಬಿಹಾರವಷ್ಟೇ ಅಲ್ಲದೆ, ಉತ್ತರ ಪ್ರದೇಶ, ಮಧ್ಯಪ್ರದೇಶದ ಚುನಾವಣೆಯಲ್ಲೂ ಗೆದ್ದಿದ್ದೇವೆ, ಕರ್ನಾಟಕ, ತೆಲಂಗಾಣದಲ್ಲೂ ಬಿಜೆಪಿಗೆ ಯಶಸ್ಸು ಸಿಕ್ಕಿದೆ. ಒಂದು ಕಾಲದಲ್ಲಿ ಬಿಜೆಪಿ 2 ಸ್ಥಾನಗಳಷ್ಟೇ ಗೆಲ್ಲುತ್ತಿತ್ತು, ಆದರೆ ಈಗ ಬಿಜೆಪಿ ಎಲ್ಲ ಸ್ಥಾನವನ್ನು ಗೆದ್ದುಕೊಳ್ಳುತ್ತಿದೆ. ಬಿಜೆಪಿ ಎಲ್ಲಾ ಜನರ ಹೃದಯದಲ್ಲರಳಿದೆ. ದೇಶದ ಮೂಲೆ ಮೂಲೆಯಲ್ಲೂ ಬಿಜೆಪಿಯಿದೆ, ಎಲ್ಲಾ ಭಾಗಗಳಲ್ಲಿರುವ ಏಕೈಕ ಪಕ್ಷ ಎಂದರೆ ಬಿಜೆಪಿ ಎಂದು ಮೋದಿ ಹೇಳಿದ್ದಾರೆ.
ಜನರ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಜನರಿಗಾಗಿ ಕೆಲಸ ಮಾಡುವ ಏಕೈಕ ಪಕ್ಷ ಬಿಜೆಪಿ. ಯುವಕರು ಇಂದು ಬಿಜೆಪಿಯನ್ನು ಹೆಚ್ಚು ನಂಬುತ್ತಾರೆ. ಬಿಜೆಪಿ ದಲಿತರು ಮತ್ತು ಬಡ ಜನರ ಧ್ವನಿ ಎಂದಿದ್ದಾರೆ. ಜನರು ಮತ್ತೆ ಮತ್ತೆ ಬಿಜೆಪಿಗೆ ಅವಕಾಶ ನೀಡುತ್ತಿದ್ದಾರೆ. ಅವರು ಬಿಜೆಪಿಯನ್ನು ಹೆಚ್ಚು ನಂಬುತ್ತಾರೆ. ಬಿಜೆಪಿಯ ಯಶಸ್ಸಿನ ಹಿಂದಿನ ಕಾರಣ ಉತ್ತಮ ಆಡಳಿತ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.