ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಖುದ್ದಾಗಿ ಲಸಿಕೆ ಅಭಿವೃದ್ಧಿ ಮತ್ತು ಉತ್ಪಾದನಾ ಪ್ರಕ್ರಿಯೆಯನ್ನು ಪರಿಶೀಲಿಸಲಿದ್ದು, ಈ ಹಿನ್ನೆಲೆ ಅವರು ನಾಳೆ ಲಸಿಕೆ ಅಭಿವೃದ್ಧಿಗೊಳಿಸಲು ಆಯ್ಕೆಯಾದ ಅಹಮದಾಬಾದ್ʼನ ಜೈಡಸ್ ಬಯೋಟೆಕ್ ಪಾರ್ಕ್, ಹೈದರಾಬಾದ್ʼನ ಭಾರತ್ ಬಯೋಟೆಕ್ ಮತ್ತು ಪುಣೆಯ ಸೆರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ ಭೇಟಿ ನೀಡಲಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಪಿಎಂಒ, ‘ಕೊರೋನಾ ವಿರುದ್ದದ ಕೊನೆಯ ಹಂತದ ಹೋರಾಟದಲ್ಲಿ ಭಾರತವಿದ್ದು, ಪ್ರಧಾನಿ ಮೋದಿ ಅವರು ವಿಜ್ಞಾನಿಗಳೊ೦ದಿಗೆ ಮಾತುಕತೆ ನಡೆಸಲಿದ್ದಾರೆ’ ಎಂದು ತಿಳಿಸಿದೆ.