Monday, July 4, 2022

Latest Posts

ಎಲ್ಲೆಂದರಲ್ಲಿ ಕಟ್ಟಡದ ತ್ಯಾಜ್ಯ ಸುರಿದ ಪಿಡಬ್ಲ್ಯೂಡಿ ಗುತ್ತಿಗೆದಾರನಿಗೆ 10 ಸಾವಿರ ರೂ ದಂಡ

ಮೈಸೂರು: ಮನೆಯ ಕಟ್ಟಡದ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿದು ಬೇಜವಾಬ್ದಾರಿತನದಿಂದ ವರ್ತಿಸಿದ ಪಿಡಬ್ಲೂ÷್ಯಡಿ ಗುತ್ತಿಗೆದಾರನೊಬ್ಬನಿಗೆ ಮೈಸೂರು ನಗರ ಪಾಲಿಕೆ ೧೦ ಸಾವಿರ ರೂ. ದಂಡ ವಿಧಿಸಿದೆ.
ಪಾಲಿಕೆ ವಲಯ ಕಚೇರಿ ೨ರ ವ್ಯಾಪ್ತಿಯಲ್ಲಿರುವ ಚಿಕ್ಕಹರದನಹಳ್ಳಿಯ ಚಂದಶೇಖರ್ ಎಂಬುವರೇ ದಂಡ ತೆತ್ತವರು. ಇವರು ತಮ್ಮ ಹಳೇ ಮನೆಯನ್ನು ಕೆಡವಿ, ತ್ಯಾಜ್ಯ ವನ್ನು ಸರ್ಕಾರಿ ಪಾಳು ಜಾಗದಲ್ಲಿ ಸುರಿಸಿದ್ದರು. ಅದಾಗಲೇ ಏಳೆಂಟು ಟಾಕ್ಟರ್ ತ್ಯಾಜ್ಯ ಸುರಿಯಲಾಗಿತ್ತು. ಮತ್ತೊಂದು ಲೋಡ್ ತಂದು ಸುರಿಯುವ ಸಂದರ್ಭದಲ್ಲಿ ಪಾಲಿಕೆಯ ಪರಿಸರ ವಿಜ್ಞಾನಿ ಸ್ಫೂರ್ತಿ, ಆರೋಗ್ಯ ನಿರೀಕ್ಷಕ ಬಸವ ರಾಜ್ ಹಾಗೂ ಸಿಬ್ಬಂದಿ, ಕಾರ್ಯಾಚರಣೆ ನಡೆಸಿ, ತಡೆದು, ದಂಡ ಹಾಕಿದರಲ್ಲದೆ, ಇನ್ನೋಮ್ಮೆ ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯದಂತೆ ಎಚ್ಚರಿಕೆ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss