ಎಲ್ಲೆಡೆ ವೈರಲ್ ಆಗತೊಡಗಿದೆ ಭಾರತೀಯ, ಚೀನಾ ಯೋಧರ ನಡುವಿನ ಸಂಘರ್ಷದ್ದೆನ್ನಲಾದ ವಿಡಿಯೋ!

0
330

ಲಡಾಖ್: ಜಾಗತಿಕ ಮಟ್ಟದಲ್ಲಿಯೇ ಸುದ್ದಿ ಮಾಡಿರುವ ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರು ಹಾಗೂ ಚೀನಾ ಯೋಧರ ನಡುವಿನ ಸಂಘರ್ಷದ ಕುರಿತಾದ್ದು ಎನ್ನಲಾದ ವಿಡಿಯೋ ಇದೀಗ ವಾರದ ಬಳಿಕ ವಿಡಿಯೋ ವೈರಲ್ ಆಗತೊಡಗಿದೆ.
ವಿಡಿಯೋ ಅಧಿಕೃತತೆ ಬಗ್ಗೆ ಈ ವರೆಗೂ ಯಾವುದೇ ಸ್ಪಷ್ಟನೆ ದೊರೆತಿಲ್ಲ. ಇದು ಯಾವ ದಿನಾಂಕದ್ದು, ನಿರ್ದಿಷ್ಟವಾಗಿ ಯಾವ ಪ್ರದೇಶದಲ್ಲಿ ನಡೆದಿದೆ ಎಂಬ ಮಾಹಿತಿ ಕೂಡ ಲಭ್ಯವಾಗಿಲ್ಲ. ಈ ವಿಡಿಯೋದಲ್ಲಿ ಭಾರತೀಯ ಸೇನೆ ಯೋಧರು ಹಾಗೂ ಚೀನಾದ ಸೇನಾ ಸಿಬ್ಬಂದಿಗಳು ನಡುವೆ ವಾಗ್ವಾದ ನಡೆದು ಕೈ-ಕೈ ಮಿಲಾಯಿಸಿ ಬಡಿದಾಟ ನಡೆದಿರುವುದು ದಾಖಲಾಗಿದೆ. ಭಾರತೀಯ ಯೋಧರು ಹಿಂದೆ ಹೋಗಿ, ಹೊಡೆದಾಡಬೇಡಿ ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕೇಳಿಸುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿರುವ ಈ ವಿಡಿಯೋ ಈಗ ಭಾರಿ ಚರ್ಚೆಗೆ ಕಾರಣವಾಗಿದೆ.

LEAVE A REPLY

Please enter your comment!
Please enter your name here