spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಎಲ್ಲೆಲ್ಲೂ ವೈಕುಂಠನಾಥನ ಸ್ಮರಣೆ.

- Advertisement -Nitte

ಎಲ್ಲೆಲ್ಲೂ ವೈಕುಂಠನಾಥನ ಸ್ಮರಣೆ.

ಬೆಂಗಳೂರು: ಬೆಂಗಳೂರಿನ ದೇವಾಲಯಗಳಲ್ಲಿ ವೈಕುಂಠ ಏಕಾದಶಿಯ ಸಡಗರ ಮತ್ತು ಸಂಭ್ರಮ ಜೋರಾಗಿದೆ.

ಮಾರ್ಗಶಿರ ಶುಕ್ಲ ಪಕ್ಷದ ಏಕಾದಶಿಯಂದು ಆಚರಿಸುವ ವೈಕುಂಠ ಏಕಾದಶಿಯನ್ನು ಬೆಂಗಳೂರಿನ ಸೀತಾ ವೃತ್ತದಲ್ಲಿರುವ ಮಂಜುನಾಥ ದೇವಾಲಯದಲ್ಲಿ ವಿವಿಧ ಪೂಜೆಗಳಿಗೆ  ಸಾಕ್ಷಿಯಾಯಿತು. ಶ್ರೀವೆಂಕಟೇಶ್ವರನಿಗೆ  ಮಧ್ಯರಾತ್ರಿ 12ಗಂಟೆಯಿಂದಲೇ ಪೂಜೆ ಆರಂಭವಾಗಿದ್ದು ಅಭಿಷೇಕ,ಸಂಕಲ್ಪ ಮತ್ತು ವಿಶೇಷವಾಗಿ ವಜ್ರ ಕವಚದಿಂದ ವೈಕುಂಠನಾಥನನ್ನು ಅಲಂಕರಿಸಲಾಗಿದೆ. ವೈಕುಂಠ ದ್ವಾರವನ್ನು ಜೋಳ, ದ್ರಾಕ್ಷಿ  ಮತ್ತು ದಾಳಂಬರಿ ಹಣ್ಣುಗಳಿಂದ ಶೃಂಗರಿಸಿದ್ದು ಆಕರ್ಷಣೀಯವಾಗಿದೆ. ಬೆಳಗ್ಗೆ 4ಗಂಟೆಯಿಂದಲೇ ಭಕ್ತರು ಸಾಲುಗಟ್ಟಲೆ ನಿಂತು ದೇವರ ದರ್ಶನಕ್ಕೆ ಕಾಯುತ್ತಿದ್ದಾರೆ.

ಶ್ರೀನಗರದ ಪ್ರಸಿದ್ಧ ದೇವಸ್ಥಾನವಾದ ಶ್ರೀ ವೆಂಕಟೇಶ್ವರ ದೇವಲಯವನ್ನು ವಿಜೃಂಬಣೆಯಿಂದ ಸಿಂಗರಿಸಲಾಗಿದೆ. ಅರ್ಚಕರು ದೇವರಿಗೆ ವಿಶೇಷ ಪೂಜೆ ನಡೆಸಿದರು. ನೂರಾರು ಜನ ಭಕ್ತರು ಸರದಿ ಸಾಲಿನಲ್ಲಿ  ನಿಂತು ದರ್ಶನಕ್ಕೆ ಕಾಯುತ್ತಿರುವುದು ಕಂಡುಬಂದಿತು.

ಇಷ್ಟೇ ಅಲ್ಲದೇ ಮಹಾಲಕ್ಷ್ಮೀ ಲೇಔಟ್, ಇಸ್ಕಾನ್, ಚಿಕ್ಕ ತಿರುಪತಿ ಮತ್ತಿತರೆ ದೇವಾಲಯಗಳಲ್ಲಿ ವೈಕುಂಠ ಏಕಾದಶಿಯನ್ನು ಆಚರಿಸಲಾಗುತ್ತಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss