Wednesday, August 17, 2022

Latest Posts

ಎಲ್ಲೆಲ್ಲೂ ಹಕ್ಕಿಜ್ವರ ಭೀತಿ: ಚಿಕನ್, ಮೊಟ್ಟೆ ತಿನ್ನಬೇಕೋ? ತಿನ್ನಬಾರದೋ? ಇಲ್ಲಿದೆ ಉತ್ತರ..

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಇತ್ತೀಚೆಗೆ ಕೊರೋನಾ ಭೀತಿ ಜೊತೆ ಹಕ್ಕಿಜ್ವರದ ಭೀತಿಯೂ ಹೆಚ್ಚಾಗಿದೆ.
ಹಕ್ಕಿಜ್ವರದ ಬಗ್ಗೆ ಕೇಳಿದಾಗಿನಿಂದ ನಾನ್‌ವೆಜ್ ಪ್ರಿಯರು ಚಿಕನ್ ತಿನ್ನುವುದು ಬಿಟ್ಟಿದ್ದು, ಚಿಕನ್ ರೇಟ್ ತುಂಬಾನೇ ಕಮ್ಮಿ ಆಗಿದೆ.
ಚಿಕನ್ ಹಾಗೂ ಮೊಟ್ಟೆ ತಿನ್ನಬೇಕೋ ಇಲ್ಲವೋ ಎನ್ನುವುದು ಹಲವರ ಸವಾಲಾಗಿದೆ. ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಉತ್ತರ ನೀಡಿದೆ.
ಸರಿಯಾಗಿ ಬೇಯಿಸಿದ ಕೋಳಿ ಹಾಗೂ ಮೊಟ್ಟೆಯನ್ನು ತಿನ್ನಬಹುದು. ಬರ್ಡ್ ಫ್ಲೂ ವೈರಸ್ ತಾಪಮಾನ ಹೆಚ್ಚಾದರೆ ಬದುಕುವುದಿಲ್ಲ. ಹಾಗಾಗಿ70 ಡಿ.ಸೆಲ್ಶಿಯಸ್( ಮಾಮುಲಿ ಆಹಾರ ತಯಾರಿಸುವ ತಾಪಮಾನ)ನಲ್ಲಿ ಚಿಕನ್ ಹಾಗೂ ಮೊಟ್ಟೆಯನ್ನು ಬೇಯಿಸಿ ತಿನ್ನಬಹುದು. ಸಂಪೂರ್ಣ ನೈರ್ಮಲ್ಯದ ನಂತರ ಕೋಳಿ ಹಾಗೂ ಮೊಟ್ಟೆಗಳನ್ನು ತಿನ್ನಬಹುದು. ಚೆನ್ನಾಗಿ ಬೇಯಿಸುವುದು ತುಂಬಾನೇ ಮುಖ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!