Thursday, August 11, 2022

Latest Posts

ಎಲ್‌ಎಸಿಯಲ್ಲಿ ಯುದ್ಧವಿಲ್ಲ, ಶಾಂತಿಯ ಸ್ಥಿತಿಯು ಇಲ್ಲ ಎಂದ ವಾಯುಸೇನೆ ಮುಖ್ಯಸ್ಥ ಆರ್‌ಕೆಎಸ್‌ ಭದೌರಿಯಾ

ಲಡಾಖ್‌: ಸದ್ಯ ಎಲ್‌ಎಸಿಯಲ್ಲಿ ಯುದ್ಧವಿಲ್ಲ, ಶಾಂತಿಯ ಸ್ಥಿತಿಯು ಇಲ್ಲ ಎಂದು ಭಾರತೀಯ ವಾಯುಸೇನೆ ಮುಖ್ಯಸ್ಥ ಆರ್‌ಕೆಎಸ್‌ ಭದೌರಿಯಾ ಹೇಳಿದ್ದಾರೆ.
ಭಾರತ ಹಾಗೂ ಚೀನಾದ ಲಡಾಖ್‌ ಗಡಿ ಪರಿಸ್ಥಿತಿ ಮಾತನಾಡಿದ ಅವರು , ಸದ್ಯದ ಗಡಿ ಪರಿಸ್ಥಿತಿ ಆತಂಕಕಾರಿಯಾಗಿದೆ. ಯುದ್ಧವಿಲ್ಲ, ಶಾಂತಿಯ ಸ್ಥಿತಿಯು ಇಲ್ಲ ಎಂದು ತಿಳಿಸಿದ್ದಾರೆ.
ಭಾರತದ ವಾಯುಸೇನೆಗೆ ರಫೇಲ್ ಯುದ್ಧ ವಿಮಾನಗಳ ಸೇರ್ಪಡೆ, ಐಎಎಫ್‌ಗೆ ಸಾಕಷ್ಟು ಪ್ರಾಯೋಗಿಕ ಮತ್ತು ಕಾರ್ಯತಂತ್ರದ ಸಾಮರ್ಥ್ಯ ವರ್ಧನೆಯನ್ನು ಒದಗಿಸಿದಂತಾಗಿದೆ ಎಂದು ತಿಳಿಸಿದ್ದಾರೆ.
ಗಡಿಯಲ್ಲಿ ಚೀನಾದ ತೊಂದರೆಗೆ ತಕ್ಕ ಉತ್ತರ ನೀಡಿರುವ ಭಾರತ ಈಗಾಗಲೇ ಹಲವು ಪ್ರಮುಖ ಆಯಕಟ್ಟಿನ ಸ್ಥಳಗಳನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss