Sunday, June 26, 2022

Latest Posts

ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಮತ್ತೆ ಏರಿಕೆ: ಎಷ್ಟು ರೂಪಾಯಿ ಹೆಚ್ಚಳ?

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ದೇಶದಲ್ಲಿ ಪೆಟ್ರೋಲ್ ಬೆಲೆ ದಾಖಲೆ ಮಟ್ಟ ತಲುಪಿದ ಬೆನ್ನಲ್ಲೇ ಇದೀಗ ಎಲ್‌ಪಿಜಿ ಬೆಲೆ ಕೂಡ ಹೆಚ್ಚಳವಾಗಿರುವುದು ಜನ ಸಾಮಾನ್ಯರಿಗೆ ಸುಟ್ಟ ಗಾಯದ ಮೇಲೆ ಬರೆ ಹಾಕಿದಂತಾಗಿದೆ.

ಫೆಬ್ರವರಿ 4 ರಂದು 25 ರೂಪಾಯಿ ಏರಿಕೆಯಾಗಿದ್ದ ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ದರ ಈಗ 50 ರೂ. ಹೆಚ್ಚಿಸಲಾಗಿದೆ.  ಹೆಚ್ಚಿದ ದರಗಳು ಇಂದಿನಿಂದಲೇ ಅನ್ವಯವಾಗಿವೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ  14.2 ಕೆಜಿ ಅನಿಲ ಸಿಲಿಂಡರ್ ಬೆಲೆ 769 ರೂ.ಗೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಭಾನುವಾರ ಅನಿಲ ಸಿಲಿಂಡರ್ ದರ 722 ರೂಪಾಯಿ ಇತ್ತು. ಇವತ್ತು 772 ರೂಪಾಯಿ ಹೆಚ್ಚಳವಾಗಿದೆ.

ಕೊರೊನಾ ಕಾರಣದಿಂದಾಗಿ ಕೇಂದ್ರ ಸರ್ಕಾರ ಆದಾಯ ಕೊರತೆ ಎದುರಿಸುತ್ತಿದ್ದು, ಗ್ರಾಹಕರಿಗೆ ನೀಡುತ್ತಿದ್ದ ಸಬ್ಸಿಡಿಯನ್ನ ನಿಲ್ಲಿಸಲಾಗಿದೆ. ಈ ಹಿನ್ನಲೆ ಪೂರ್ಣ ಹೊರೆಯನ್ನ ಗ್ರಾಹಕರೇ ಭರಿಸಬೇಕಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss