ಹೊಸದಿಗಂತ ಆನ್ ಲೈನ್ ಡೆಸ್ಕ್:
ಭಾರತ-ಚೀನಾ ಗಡಿ ಸಂಘರ್ಷದ ನಡುವೆ ವಾಸ್ತವಿಕ ನಿಯಂತ್ರಣ ರೇಖೆ(ಎಲ್ ಎಸಿ)ಯಲ್ಲಿ ಪರಿಸ್ಥಿತಿ ಉದ್ವಿಘ್ನವಾಗಿದ್ದು, ಎಲ್ ಎಸಿಯಲ್ಲಿ ಯಾವುದೇ ಬದಲಾವಣೆಯನ್ನು ಒಪ್ಪುವುದಿಲ್ಲ ಎಂದು ಭಾರತೀಯ ರಕ್ಷಣ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ತಿಳಿಸಿದ್ದಾರೆ.
ಇಂದು ಭಾರತ ಚೀನಾ ನಡುವಿನ 8ನೇ ಸುತ್ತಿನ ಕಾರ್ಪ್ ಕಮಾಂಡರ್ ಮಟ್ಟದ ಮಾತುಕತೆ ನಡೆಯಲಿದ್ದು, ಲಡಾಖ್ ನ ಗಡಿಯಲ್ಲಿ ತುರ್ತು ಪರಿಸ್ಥಿತಿಯಲ್ಲಿದ್ದು, ಭಾರತ ಚೀನಾಕ್ಕೆ ತಕ್ಕ ಉತ್ತರ ನೀಡಲು ಸಿದ್ಧವಾಗಿದೆ ಎಂದು ತಿಳಿಸಿದರು.
ಗಡಿಯಲ್ಲಿ ಚೀನಾದ ಗಡಿ ಅತಿಕ್ರಮಣಗಳು ಮತ್ತು ಅಪ್ರಚೋದಿತ ಯುದ್ಧತಂತ್ರದ ಮಿಲಿಟರಿ ಕ್ರಮಗಳು ದೊಡ್ಡ ಸಂಘರ್ಷಕ್ಕೆ ತಿರುಗುತ್ತಿದೆ ಎಂದು ರಾವತ್ ಹೇಳಿದರು.