ಸಂಕ್ರಾಂತಿಯಂದು ತುಂಬಾ ಜನ ಅಂಗಡಿಯಲ್ಲಿ ಸಿಗುವ ಸಂಕ್ರಾಂತಿ ಕಾಳುಗಳನ್ನು ತರುತ್ತಾರೆ. ಹಾಗೆ ಕೆಲವರು ಮನೆಯಲ್ಲಿಯೇ ಎಳ್ಳು ಬೆಲ್ಲ ತಯಾರಿಸುತ್ತಾರೆ. ಈ ಎಳ್ಳು, ಬೆಲ್ಲ ಮಾಡುವುದು ಹೇಗೆ ಗೊತ್ತಾ? ಸಿಂಪಲ್ ಆಗಿ ಹೀಗೆ ಮಾಡಿ…
ಬೇಕಾಗುವ ಸಾಮಗ್ರಿ:
ಎಳ್ಳು
ಬೆಲ್ಲ
ಸಕ್ಕರೆ
ಹುರಿದ ಶೇಂಗಾ
ಪುಟಾಣಿ
ಕುಸರಳ್ಳು
ತುರಿದ ಕೊಬ್ಬರಿ
ಮಾಡುವ ವಿಧಾನ:
3 ಚಮಚ ಎಳ್ಳು, 2 ಚಮಚ ಬೆಲ್ಲ, 1 ಚಮಚ ಸಕ್ಕರೆ, ಚಿಟಿಕೆ ಏಲಕ್ಕಿ ಪುಡಿ, ಹುರಿದ ಶೇಂಗಾ 3 ಚಮಚ, 3 ಚಮಚ ಪುಟಾಣಿ, ಕುಸರಳ್ಳು 3 ಚಮಚ, ತುರಿದ ಕೊಬ್ಬರಿ 3 ಚಮಚ ಇವೆಲ್ಲವನ್ನೂ ಒಂದು ಪಾತ್ರೆಗೆ ಹಾಕಿಕೊಂಡು ಮಿಕ್ಸ್ ಮಾಡಿದರೆ ಎಳ್ಳು ಬೆಲ್ಲ ರೆಡಿ.