Wednesday, August 10, 2022

Latest Posts

ಎಷ್ಟೇ ಕಷ್ಟಪಟ್ಟರೂ ರಾತ್ರಿ ನಿದ್ದೆ ಬರುವುದಿಲ್ಲವಾ? ಸುಖಕರ ನಿದ್ದೆಗೆ ಈ ಟಿಪ್ಸ್ ಫಾಲೋ ಮಾಡಿ

ಕೆಲವರು ಎಷ್ಟು ಬೇಗ ಬೇಕಾದರೂ ಏಳುತ್ತಾರೆ. ಆದರೆ ರಾತ್ರಿ ಮಾತ್ರ ನಿದ್ದೆ ಮಾಡುವುದಿಲ್ಲ. ನಾಲ್ಕು ಗಂಟೆ, ಮೂರು ಗಂಟೆ ಹೀಗೆ ಯಾವುದೋ ಸಮಯಕ್ಕೆ ಮಲಗುತ್ತಾರೆ. ಇದು ಖಂಡಿತಾ ಹೆಲ್ತಿ ರೊಟೀನ್ ಅಲ್ಲವೇ ಅಲ್ಲ. ಇದನ್ನು ಇಪ್ಪತ್ತು ದಿನ ಮುಂದುವರಿಸಿದರೆ ಇದೇ ಅಭ್ಯಾಸ ಆಗುತ್ತದೆ. ಬೆಳಗ್ಗೆ ಬೇಗ ಏಳುವುದು ಒಳ್ಳೆಯ ಅಭ್ಯಾಸ. ಆದರೆ ರಾತ್ರಿ ಸರಿಯಾದ ಸಮಯ್ಕಕೆ ಮಲಗಿದರೆ ಮಾತ್ರ ನೀವು ದಿನವಿಡೀ ಖುಷಿಯಾಗಿರುತ್ತೀರಿ.. ರಾತ್ರಿ ನಿದ್ದೆ ಬಾರದವರಿಗಾಗಿ ಈ ಟಿಪ್ಸ್
ಓಡುವ ಆಲೋಚನೆಗಳಿಗೆ ಬ್ರೇಕ್ ಹಾಕಿ: ನಿಮ್ಮ ಬ್ಯುಸಿನೆಸ್ ಅಥವಾ ಕೆಲಸದ ಬಗ್ಗೆ ಆಲೋಚಿಸುತ್ತಾ ಮಲಗುತ್ತೀರಿ. ನನ್ನ ಕೆಲಸ ಹೋದರೆ, ಅಥವಾ ನನಗೆ ಸಂಬಳ ಸಾಲುತ್ತಿಲ್ಲ, ಈಗ ಒಬ್ಬನೆ ಮದುವೆಯಾದರೆ ಹೇಗೆ? ಮಕ್ಕಳಾದಮೇಲೆ ಹೇಗೆ? ಈ ರೀತಿ ಆಲೋಚನೆಗಳ ಸಾಲು ನಿಮ್ಮ ತಲೆಯಲ್ಲಿ ಓಡುತ್ತದೆ ಇದನ್ನು ನಿಲ್ಲಿಸಿ. ಆಗಿದ್ದನ್ನು ಮುಂದೆ ನೋಡಿಕೊಳ್ಳೋಣ. ಈಗ ಒಳ್ಳೆಯದನ್ನೇ ನೆನೆಸಿ.
ನಿದ್ದೆ ಬರದಿದ್ದರೆ ಎದ್ದು ಬಿಡಿ: ನಿದ್ದೆ ಬರುತ್ತಿಲ್ಲ ಎಂದರೆ ಹಾಸಿಗೆ ಮೇಲೆ ಕುಳಿತು ಒದ್ದಾಡಬೇಡಿ. ಎದ್ದು ಹೊರ ಬನ್ನಿ ಒಂದು ಹತ್ತು ನಿಮಿಷ ಬೇರೆ ಏನಾದರೂ ಮಾಡಿ, ನಿಮಗೇ ಬೋರು ಬಂದು ನಿದ್ದೆ ಬರುತ್ತದೆ.
ಪುಸ್ತಕ ಓದಿ: ಕೆಲವರಿಗೆ ಪುಸ್ತಕ ಓದುವ ಹವ್ಯಾಸ ಇರುವುದಿಲ್ಲ. ಒಳ್ಳೆಯ ನಿದ್ದೆಗೆ ಪುಸ್ತಕ ಸಹಾಯ ಮಾಡುತ್ತದೆ. ನಿದ್ದೆ ಬಾರದ ಸಮಯ, ಎದ್ದು ನಾಲ್ಕು ಪುಟ ಓದಿ. ಸುಸ್ತಾದ ನಿಮಗೆ ನಿದ್ದೆ ಬೇಗ ಬರುತ್ತದೆ.
ಟಿ.ವಿ. ಮೊಬೈಲ್, ಕಂಪ್ಯೂಟರ್ ಬೇಡ: ರಾತ್ರಿ ಮಲಗಿದ ನಂತರ ಸಿನಿಮಾ ನೋಡುವುದು, ಸೀರಿಸ್ ನೋಡುವುದು ಅಭ್ಯಾಸ ಇದು ನಿಮ್ಮ ನಿದ್ದೆಯನ್ನು ಕೆಡಿಸುತ್ತದೆ. ಅಲ್ಲದೇ ಕಣ್ಣಿಗೂ ತೊಂದರೆ ನೀಡುತ್ತದೆ. ಒಂದು ಬಾರಿ ಬೆಡ್‌ಗೆ ಹೋದ ಮೇಲೆ ಮೊಬೈಲ್ ಮುಟ್ಟಬೇಡಿ.
ಕನಸು ಕಾಣುವ ಪ್ರಯತ್ನ: ನಿಮಗೆ ಒಂದು ಮನೆ ಕಟ್ಟಬೇಕು, ಪ್ರೀತಿಸಿದ ಹುಡುಗನ ಮದುವೆ ಆಗಬೇಕು, ಸ್ನೇಹಿತರ ಜೊತೆ ಟ್ರಿಪ್ ಹೋಗಬೇಕು ಹೀಗೆ ಏನೇನೋ ಇರುತ್ತದೆ. ಇಂಥ ಆಲೋಚನೆ ಮಾಡಿ. ಇದು ನಿಮ್ಮ ಜೀವನದಲ್ಲಿ ನೆರವೇರಿದರೆ ಹೇಗಿರುತ್ತದೆ ಎಂಬ ಇಮ್ಯಾಜಿನ್ ಮಾಡಿ. ಇದು ಸುಖಕರವಾಗಿದ್ದು, ಸ್ವಲ್ಪ ಸಮಯ ರಿಯಾಲಿಟಿ ಮುಂದೂಡತ್ತದೆ. ಒಳ್ಳೆ ನಿದ್ದೆ, ಒಳ್ಳೆ ಕನಸು ನಿಮ್ಮದಾಗುತ್ತದೆ.
ವಾತಾವರಣ ಬದಲಾಯಿಸಿ: ಇಷ್ಟೆಲ್ಲಾ ಮಾಡಿದರೂ ನಿಮಗ ಎನಿದ್ದೆ ಬಾರದೇ ಹೋದರೆ, ಹಾಸಿಗೆ ದಿಂಬು ಬದಲಾಯಿಸಿ. ಬೆಡ್‌ಶೀಟ್, ಲೈಟ್, ಕರ್ಟನ್ ಮೇಲೂ ಗಮನ ಇರಲಿ. ಯಾವ ರೂಮಿನಲ್ಲಿ ಹೆಚ್ಚು ಹೊರಗಿನ ಶಬ್ದ ಕೇಳುವುದಿಲ್ಲವೋ ಆ ರೂಮಿನಲ್ಲೇ ಮಲಗಿ.
ವ್ಯಾಯಾಮ ಇರಲಿ: ದೇಹ ಸುಸ್ತಾದಾಗ ಮಾತ್ರ ನಿದ್ದೆ ಸಾಧ್ಯ. ನಿಮಗೆ ಬರೀ ಆಫೀಸ್ ವರ್ಕ್ ಇದ್ದರೆ ಜಿಮ್ ಹೋಗಿ, ವ್ಯಾಯಾಮ ಮಾಡಿ. ಸುಸ್ತಾಗಿ ನಿದ್ದೆ ಖಂಡಿತಾ ಬರುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss