ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಎಷ್ಟೇ ಹೇಳಿದ್ರೂ ಪ್ಲಾಸ್ಟಿಕ್ ಬಳಕೆ ಮಾತ್ರ ಕಡಿಮೆ ಆಗಿಲ್ಲ.. ಅದಕ್ಕೆ ಇಲ್ಲಿದೆ ಮಾಸ್ಟರ್ ಪ್ಲಾನ್!

  • ಹಿತೈಷಿ

ಒಂದು ಸಣ್ಣ ದಿನಸಿ ಪ್ಯಾಕೆಟ್ ನಿಂದ ದೊಡ್ಡ ವಸ್ತುವಿನ ಖರೀದಿಯಲ್ಲೂ ಪ್ಲಾಸ್ಟಿಕ್ ಕೈವಾಡ ಇದ್ದೇ ಇರುತ್ತೆ. ಹಾಗೆ ಸುಮ್ಮನೆ ಲೆಕ್ಕ ಹಾಕಿದರೆ, ಭಾರತ ಒಂದರಲ್ಲೇ ( 2018-19) 25.900ಕ್ಕೂ ಅಧಿಕ ಟನ್ ನಷ್ಟು ಪ್ಯಾಸ್ಟಿಕ್ ತ್ಯಾಜ್ಯ ಪ್ರತಿ ನಿತ್ಯ ಸಂಗ್ರಹಣೆಯಾಗಿದೆ. ಅಂದರೆ ವರ್ಷಕ್ಕೆ ಬರೋಬ್ಬರಿ 9.6 ಮಿಲಿಯನ್ ಟನ್ ನಷ್ಟು ಪ್ಯಾಸ್ಟಿಕ್ ತ್ಯಾಜ್ಯ.

ಈ ಪ್ಲಾಸ್ಟಿಕ್ ಮಾರಿಯನ್ನು ಕಡಿಮೆ ಮಾಡುವ ಉದ್ದೇಶದಿಂದ ಹೊಸ ಪ್ಲಾನ್ ನೊಂದಿಗೆ ಹೊರಹೊಮ್ಮುತ್ತಾರೆ ಸಮೀಕ್ಷಾ ಗನೆರಿವಾಲ್. ಇವರ ಈ ಪ್ರಯತ್ನದಿಂದ ಇವತ್ತಿಗೂ ಲಕ್ಷಾಂತರ ಸಂಖ್ಯೆಯ ಪ್ಲಾಸ್ಟಿಕ್ ತ್ಯಾಜ್ಯ ಕಡಿಮೆಯಾಗಿದೆ.

compostable paper bottles

ಏನು ಪ್ಲಾನ್?
ಹೌದು ಈಕೆ ಪ್ರಾಂಭಿಸಿದ್ದು ಒಂದು ಕಾಗ್ಜಿ ಬಾಟಲ್ಸ್(ಪೇಪರ್ ಬಾಟಲ್) ಎಂಬ ಕಂಪನಿ. ಇದು ಉತ್ತರ ಪ್ರದೇಶದ ನೋಯ್ಡಾದಲ್ಲಿದೆ. ಇಲ್ಲಿ ಮಾಡೋದು ಶೇ.100ರಷ್ಟು ಮಿಶ್ರಗೊಬ್ಬರವಾಗಲಿದೆ. ಅಂದರೆ ಈ ಬಾಟಲಿಗಳು ಸುಲಭವಾಗಿ ಕಾಂಪೋಸ್ಟ್ ಆಗಲಿದೆ ಎಂದು.

ಇದಕ್ಕೆ ಪ್ರೇರಣೆ ಏನು?
ಎಂಬಿಎ ಪದವಿ ವಿದ್ಯಾರ್ಥಿನಿಯಾಗಿದ್ದಾಗ ಸಮೀಕ್ಷಾ ಗೆ ಕಾಲೇಜಿನಲ್ಲಿನ ಪ್ಲಾಸ್ಟಿಕ್ ಬಳಕೆ ಇಳಿಸುವ ಬಗೆಗಿನ ಯೋಜನೆಯೊಂದಕ್ಕೆ ಕೈ ಜೋಡಿಸಿದರು. ಅದಾಗ ಪ್ಲಾಸ್ಟಿಕ್ ಗೆ ಪರ್ಯಾಯ ಹುಡುಕೋದೆ ಕಷ್ಟವಾಗಿತ್ತು. ಆದರೆ ಇದನ್ನೇ ಮೂಲವಾಗಿಟ್ಟುಕೊಂಡು ಅಧ್ಯಯನ ಆರಂಭಿಸಿದರು.

Noida Woman's 100% Biodegradable Paper Bottles Are Cheaper Than Plastic Ones!

ಹೇಗೆ ಪ್ರಾರಂಭ?
2006ರಲ್ಲಿ ಪದವಿ ಮುಗಿಸಿದ ಬಳಿಕ ಸಮೀಕ್ಷಾ ಹೈದರಾವಾದ್ ಹಾಗೂ ನೋಯ್ಡಾದ ಅನೇಕ ಅಂತಾರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡಿದ್ದರು. ಬಳಿಕ 2016ರಲ್ಲಿ ತಮ್ಮದೇ ಆದ ಸ್ವಂತ ಪ್ಯಾಕೇಜಿಂಗ್ ಸಲ್ಯೂಷನ್ ಕಂಪನಿ ಪ್ರಾರಂಭಿಸಿದರು.
ಸಂಸ್ಥೆ ಪ್ರಾರಂಭಿಸಿದ್ದು ಸಖತ್ ಖುಷಿ ಕೊಟ್ಟರೂ ಕೂಡ. ಅದನ್ನು ನಿಭಾಯಿಸೋದೆ ಕಷ್ಟ ಆಗುತ್ತೆ. ಆದರೂ ಸಾಧಿಸುವ ಛಲ ಬಿಡದ ಸಮೀಕ್ಷಾ ತಮ್ಮದೇ ಹೂಡಿಕೆಯಲ್ಲಿ ಕಂಪನಿ ಪ್ರಾರಂಭಿಸಿದರು.

ಸಂಸ್ಥೆ ಪ್ರಾರಂಭಿಸೋದು ಸುಲಭ ಆಯ್ತಾ?
ಯಾವುದೇ ಶೈಕ್ಷಣಿಕ ತರಬೇತಿ ಇಲ್ಲದ ಕಾರಣ ಮೊದಲೆರಡು ವರ್ಷ ತುಂಬಾ ಕಷ್ಟವಾಯಿತು. ತಮಗೆ ಬೇಕಾಗಿದ್ದ ವಿನ್ಯಾಸಕರು, ವಿಜ್ಞಾನಿಗಳನ್ನು ಹುಡುಗಿ ತಮ್ಮ ಪ್ರಾಡೆಕ್ಟ್ ಅಭಿವೃದ್ಧಿ ಮಾಡಲು ಶ್ರಮಿಸಿದೆ ಎನ್ನುತ್ತಾರೆ ಸಮೀಕ್ಷಾ.
ಅಷ್ಟು ಮಾತ್ರವಲ್ಲ ಈ ವಿಭಿನ್ನ ತಯಾರಿಕೆಯ ಪೇಪರ್ ಬಾಟಲ್ ಗಳಿಗೆ ವಿಶೇಷ ಯಂತ್ರೋಪಕರಣಗಳನ್ನು ಹುಡುಕೋದೆ ದೊಡ್ಡ ಸವಾಲಾಗಿತ್ತು.

ಆಕರ್ಷಕ ಹೇಗೆ?
ಈ ಬಾಟಲಿಗಳು ಸಾಮನ್ಯ ನೀರಿನ ಬಾಟಲ್ಸ್ ರೀತಿ ಇರುವುದಿಲ್ಲ. ಬದಲಿಗೆ ಕಂಪ್ಲೀಟ್ ಕವರ್ ಆಗಲಿದ್ದು, ಇದರ ಡಿಸೈನ್ ಕೂಡ ಡಿಫರೆಂಟ್ ಆಗಿದೆ. ಇದರ ಡಿಫರೆಂಟ್ ಲುಕ್ ಗೆ ಗ್ರಾಹಕರು ಖುಷಿಯಾಗಿದ್ದು, ಖರೀದಿಗೆ ಉತ್ಸುಕರಾಗಿರುತ್ತಾರಂತೆ.

compostable paper bottles

ಸಂಸ್ಥೆ ಹೆಸರಿನ ಹಿಂದಿನ ಅರ್ಥವೇನು?
ಈ ಪೇಪರ್ ಬಾಟಲ್ ಕಂಪನಿ ದೇಶದಲ್ಲೇ ಮೊದಲು. ಜೊತೆಗೆ ಪೇಪರ್ ನಿಂದ ಮಾಡುವ ಬಾಟಲ್ ಆಗಿರುವುದರಿಂದ ಇದಕ್ಕೆ ಕಾಗಜ್ ಅರ್ಥ ಬರುವ ಕಾಗ್ಜಿ ಎಂದು ಹೆಸರಿಡಲಾಗಿದೆ.
ಇಷ್ಟೇ ಅಲ್ಲಾ. ಭಾರತದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಹಾಗೂ ಏಕ ಬಳಕೆ ಪ್ಲಾಸ್ಟಿಕ್ ಗೆ ನಿಷೇಧ ಹೇರಿದಾಗ ಸಖತ್ ಖುಷಿ ಪಟ್ಟಿದ್ದ ಸಮೀಕ್ಷಾ ತಮ್ಮ ಕೆಲಸದಲ್ಲಿ ಮತ್ತಷ್ಟು ಕ್ರಿಯೇಟಿವ್ ಆಗಲು ಮುಂದಾದರು.

ಹೂಡಿಕೆ ಹೇಗೆ?
ಕಾಗ್ಜಿ ಸಂಸ್ಥೆಗೆ ಆರಂಭಿಕ ಹಂತದಲ್ಲಿ 12 ಲಕ್ಷ ರೂ. ಹೂಡಿಕೆ ಮಾಡಿದ್ದು, ಬಾಟಲಿನ ಜೊತೆಗೆ ಇದೀಗ ಶಾಂಪೂ, ಲೋಷನ್ ಗಳನ್ನೂ ಉತ್ಪಾದಿಸುತ್ತಿದೆ. ಇಲ್ಲಿ ಮಾರಾಟವಾಗುವ ಇಕೋ ಫ್ರೆಂಡ್ಲಿ ಬಾಟಲ್ ಗಳಿಗೆ ಕೇವಲ 19 ರೂ. ಯಿಂದ 22 ರೂ. ಮಾತ್ರ ಆಗಲಿದೆ.

ಪ್ರತಿ ಜೀವಿಗೂ ಪರಿಸರವೇ ಸ್ನೇಹಿತನಾಗಿರುತ್ತದೆ. ಅದನ್ನು ರಕ್ಷಿಸುವ ಕೆಲಸ ಪ್ರತಿಯೊಬ್ಬನ ಹೊಣೆಯಾಗಿದ್ದು, ಯಾವುದೇ ವಿಭಿನ್ನ ರೀತಿಯಲ್ಲಿ ಹೊಸ ಪ್ರಯೋಗ ಮಾಡಿದರೂ ಭಾರತದಲ್ಲಿ ಕ್ಲಿಕ್ ಆಗುತ್ತೆ ಅನ್ನೋದಕ್ಕೆ ಸಮೀಕ್ಷಾ ಅವರ ಪೇಪರ್ ಬಾಟಲ್ ಯೋಜನೆಯೇ ಸಾಕ್ಷಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss