ಅಜ್ಜಿ ತಲೆಮೇಲೆ ಕುಟ್ಟಿದರೆ ಸಾವಿರಾರು ಮೊಮ್ಮಕ್ಕಳು. ಈ ಒಗಟನ್ನು ನೀವೆಲ್ಲ ಕೇಳಿದ್ದೀರಿ ಇದರ ಉತ್ತರ ಬೆಳ್ಳಳ್ಳಿ. ನಾವು ಬಳಸುವ ಆಹಾರದಲ್ಲಿ ದೇಹದ ಆರೋಗ್ಯ ಕಾಪಾಡುವುದರಲ್ಲಿ ಬೆಳ್ಳುಳ್ಳಿಯ ಪಾತ್ರ ಹಿರಿದು.ಪ್ರತಿದಿನ ಒಂದು ಆಪಲ್ ತಿನ್ನಿ ವೈದ್ಯರಿಂದ ದೂರವಿರಿ ಎಂದು ಹೇಳುವಂತೆ ಪ್ರತಿದಿನವೊಂದು ಇಡೀ ಬೆಳ್ಳುಳ್ಳಿ ಬಳಸಿ ಅನಾರೋಗ್ಯ ಸಮಸ್ಯೆಗಳಿಂದ ಮುಕ್ತರಾಗಿ ಎಂದು ಹೇಳುತ್ತದೆ ವೈದ್ಯಕೀಯ ಶಾಸ್ತ್ರ. ಸಾಕಷ್ಟು ಜನರು ಬೆಳ್ಳುಳ್ಳಿಯಿಂದ ದೂರ ಇರ್ತಾರೆ, ಆದರೆ ಆರೋಗ್ಯದ ದೃಷ್ಟಿಯಿಂದ ಹಾಗೆ ಮಾಡುವುದು ಸರಿಯಲ್ಲ. ಬೆಳ್ಳುಳ್ಳಿಯಲ್ಲಿ ಪ್ರೋಟೀನ್, ವಿಟಮಿನ್ ಎ.ಬಿ. ಸಿ ಸೇರಿದಂತೆ ಹಲವು ಪೌಷ್ಟಿಕಾಂಶಗಳಿವೆ. ಮನೆ ಮದ್ದಿನಲ್ಲಿ ಬೆಳ್ಳುಳ್ಳಿಯ ಪಾತ್ರ ಹಿರಿದು.
ಕಿವಿ ನೋವು: ಕೆಲವೊಮ್ಮೆ ಇದ್ದಕ್ಕಿದ್ದಂತೆಯೇ ಕಿವಿ ನೋವು ಬರುತ್ತದೆ. ಅಂಥ ಸಮಯದಲ್ಲಿ ಬೆಳ್ಳುಳ್ಳಿಯನ್ನು ಜಜ್ಜಿ ಅದನ್ನು ಎಣ್ಣೆಯಲ್ಲಿ ಕುದಿಸಿ ಆ ಎಣ್ಣೆಯನ್ನು ಕಿವಿಗೆ ಹಾಕಬೇಕು. ಕಿವಿನೋವು ಕಡಿಮೆ ಆಗುತ್ತದೆ.
ಗ್ಯಾಸ್ಟ್ರಿಕ್: ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ದಿನ ಬೆಳಿಗ್ಗೆ ಹಸಿದ ಹೊಟ್ಟೆಯಲ್ಲಿ ಒಂದು ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆ ಆಗುತ್ತದೆ.
ಎದೆ ಹಾಲು: ಬೆಳ್ಳುಳ್ಳಿಯಲ್ಲಿ ಪ್ರೋಟೀನ್, ವಿಟಮಿನ್ ಎ.ಬಿ ಸಿ ಸೇರಿದಂತೆ ಹಲವು ಪೌಷ್ಟಿಕಾಂಶಗಳಿವೆ. ಹಾಲಿನಲ್ಲಿ ಬೆಳ್ಳುಳ್ಳಿ ಹಾಕಿ ಕುದಿಸಿ ಬಾಣಂತಿಯರಿಗೆ ಕೊಟ್ಟರೆ ಎದೆ ಹಾಲು ಹೆಚ್ಚುತ್ತದೆ.
ಕೀಲು ನೋವು: ಮಂಡಿ ನೋವು, ಕೀಲುನೋವು, ಕಾಲು ನೋವು ಮುಂತಾದ ನೋವುಗಳಿಗೆ ಬೆಳ್ಳುಳ್ಳಿ ಎಣ್ಣೆಯನ್ನು ಮಾಡಿಕೊಂಡು ಹಚ್ಚುವುದರಿಂದ ಕಡಿಮೆ ಆಗುತ್ತದೆ. ಕೊಬ್ಬರಿ ಎಣ್ಣೆಗೆ ಜಜ್ಜಿಕೊಂಡ ಬೆಳ್ಳುಳ್ಳಿಯನ್ನು ಹಾಕಿ ಕುದಿಸಿ ಆ ಎಣ್ಣೆ ಹಚ್ಚಿಕೊಳ್ಳಬೇಕು.
ಅಸ್ತಮ : ಬೆಳ್ಳುಳ್ಳಿಯ ಹತ್ತು ಎಸಳುಗಳನ್ನು ಜಜ್ಜಿ ಮೂರನೇ ಒಂದು ಕಪ್ ಹಾಲಿನಲ್ಲಿ ಕುದಿಸಿ ನಿತ್ಯ ಬೆಳಿಗ್ಗೆ ಕುಡಿಯುವುದರಿಂದ ಆರಂಭಿಕ ಹಂತದ ಅಸ್ತಮಾವನ್ನು ನಿಯಂತ್ರಿಸಬಹುದು
ಆಮಶಂಕೆ:ಆಮಶಂಕೆ ಇರುವವರು ಬೆಳಿಗ್ಗೆ ಎದ್ದಿದ್ದೆ ಹಸಿ ಹಾಲಿಗೆ ಬೆಳ್ಳುಳ್ಳಿ ಜಜ್ಜಿ ಹಾಕಿಕೊಂಡು ಕುಡಿದರೆ ಆಮಶಂಕೆ ಕಡಿಮೆ ಆಗುತ್ತದೆ.
ದೇಹಕ್ಕೆ ಆರೋಗ್ಯ: ಪ್ರತಿ ದಿನ ಊಟದಲ್ಲಿ ಬೆಳ್ಳುಳ್ಳಿಯ ಹಸಿ ಎಸಳುಗಳನ್ನು ಊಟದ ನಡುವೆ ತಿನ್ನಿರಿ. ಪ್ರತಿ ಊಟದಲ್ಲಿ ನಾಲ್ಕೈದು ಎಸಳುಗಳು ತಿಂದರೂ ಸಾಕು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಅಥವಾ ಎರಡು ಚಿಕ್ಕ ಎಸಳುಗಳನ್ನು ತಿನ್ನುವುದೂ ಫಲಕಾರಿಯಾಗಿದೆ. ದೇಹಕ್ಕೆ ಒಳ್ಳೆಯ ಆರೋಗ್ಯ ನೀಡುತ್ತದೆ.
ರೋಗ ನಿರೋಧಕ ಶಕ್ತಿ: ಬೆಳ್ಳುಳ್ಳಿಯನ್ನು ರೋಗ ನಿರೋಧಕ ನೈಸರ್ಗಿಕ ಔಷಧಿ ಎನ್ನುತ್ತಾರೆ. ಇದನ್ನು ದಿನ ಸೇವಿಸುವುದರಿಂದ ರೋಗ ನಿರೋಧಕ ಅಂಶ ಹೆಚ್ಚುತ್ತದೆ. ಹಾಗಾಗಿ ದಿನ ಸೇವಿಸ ಬೇಕು.
ಬೆಳ್ಳುಳ್ಳಿಯಲ್ಲಿ ಅನೇಕ ಧನಾತ್ಮಕ ಅಂಶಗಳಿವೆ ಇದನ್ನು ಸೇವಿಸುವುದರಿಂದ ಆರೋಗ್ಯದಲ್ಲಿ ಒಳ್ಳೆಯ ಬದಲಾವಣೆ ಕಾಣಬಹುದು.