spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಎಸ್ಪಿ ಬಿ ನಿಧನಕ್ಕೆ ಸಂತಾಪ ಸೂಚಿಸಿದ ವಿಜಯ್ ಸೇತುಪತಿ

- Advertisement -Nitte

ಎಸ್ ಪಿ ಬಾಲಸುಬ್ರಹ್ಮಣ್ಯಂ  ಅವರ ಅಗಲಿಕೆಗೆ ಇಡೀ ಭಾರತವೇ ಕಂಬನಿ  ಮಿಡಿದಿದೆ. ತಮಿಳುನಾಡಿನ ತಮ್ಮ ತೋಟದ ಮನೆಯಲ್ಲಿ ಖ್ಯಾತ ಗಾಯಕ ಅಂತಿಮ ಸಂಸ್ಕಾರ ಮಾಡಲಾಯಿತು. ತಮಿಳು ನಟ ವಿಜಯ್ ಸೇರಿದಂತೆ ಹಲವು ಗಣ್ಯರು ಅಂತಿಮಯಾತ್ರೆಯಲ್ಲಿ ಭಾಗಿಯಾಗಿದ್ದರು. ಎಸ್ಪಿಬಿ ಅವರ ಅಂತಿಮಯಾತ್ರೆಯಲ್ಲಿ ಭಾಗಿಯಾಗದ ಕಾರಣ ಜೈಪುರದಲ್ಲೇ ಸಂತಾಪ ಸೂಚಿಸಿದ್ದಾರೆ ತಮಿಳು ನಟ ವಿಜಯ್ ಸೇತುಪತಿ. ವಿಜಯ್ ಸೇತುಪತಿ, ಹಿರಿಯ ನಟಿ ರಾಧಿಕಾ ಶರತ್ ಕುಮಾರ್, ರಾಜೇಂದ್ರ ಪ್ರಸಾದ್, ತಾಪ್ಸಿ ಪೆನ್ನು, ಯೋಗಿಬಾಬು ಅವರೆಲ್ಲರೂ ಚಿತ್ರೀಕರಣ ನಿಮಿತ್ತ ಜೈಪುರಕ್ಕೆ ತೆರಳಿದ್ದರು. ಈ ನಡುವೆ ಎಸ್ಪಿಬಿ ನಿಧನನ ಸುದ್ದಿ ತಿಳಿದಿದೆ.

ಈ ಹಿನ್ನೆಲೆ ಜೈಪುರದಲ್ಲಿಯೇ ಎಸ್ಪಿಬಿ ಅವರ ಭಾವಚಿತ್ರ ಇಟ್ಟು ಅಂತಿಮ ನಮನ ಸಲ್ಲಿಸಲಾಗಿದೆ. ದೀಪ ಹಚ್ಚುವ ಮೂಲಕ ಖ್ಯಾತ ಗಾಯಕನಿಗೆ ವಿದಾಯ ಹೇಳಿದ್ದಾರೆ. ಈ ಫೋಟೋವನ್ನು ರಾಧಿಕಾ ತಮ್ಮ ಟ್ವಿಟ್ಟರ್‌ನಲ್ಲಿ  ಹಂಚಿಕೊಂಡಿದ್ದು, ’’ಲೆಜೆಂಡ್ಗೆ ನಮ್ಮಿಂದ ವಿದಾಯ’’ ಎಂದು ತಿಳಿಸಿದ್ದಾರೆ. ಸೆಪ್ಟೆಂಬರ್ ೨೫ ರಂದು ಬಾಲಸುಬ್ರಹ್ಮಣ್ಯಂ ಅವರ ನಿಧನ ಸುದ್ದಿ ಗೊತ್ತಾಗುತ್ತಿದ್ದಂತೆ ರಾಧಿಕಾ ಶರತ್ ಕುಮಾರ್ ಮತ್ತು ರಾಜೇಂದ್ರ ಪ್ರಸಾದ್ ಟ್ವಿಟ್ಟರ್ ಮೂಲಕ ಬೇಸರ ವ್ಯಕ್ತಪಡಿಸಿದ್ದರು. ವಿಡಿಯೋ ಹಂಚಿಕೊಂಡಿದ್ದ ರಾಜೇಂದ್ರ ಪ್ರಸಾದ್ ಗೆಳೆಯನ ಅಗಲಿಕೆಗೆ ಕಣ್ಣೀರು ಹಾಕಿದ್ದರು

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss