Thursday, August 11, 2022

Latest Posts

ಎಸ್ಸೆಸೆಲ್ಸಿಯಲ್ಲಿ ರಾಜ್ಯಮಟ್ಟದಲ್ಲಿ ಸಾಧನೆಗೈದ ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ ಸ್ಪೀಕರ್ ಕಾಗೇರಿ

ಶಿರಸಿ: ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಸಾಧನೆ ಗೈದ ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗೆ ಸ್ಫೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿನಂದನೆ ಸಲ್ಲಿಸಿದ್ದಾರೆ.
ಶಿರಸಿಯ ಶ್ರೀ ಮಾರಿಕಾಂಬಾ ಪ್ರೌಢ ಶಾಲೆಯ ಸನ್ನಿಧಿ ಮಹಾಬಲೇಶ್ವರ ಹೆಗಡೆ ಇವಳು ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿರುವುದು ಮತ್ತು ಹೆಗಡೆಕಟ್ಟಾ ಪ್ರೌಢ ಶಾಲೆಯ ಅಖಿಲಾ ಭಾಸ್ಕರ್ ಹೆಗಡೆ (ಕನ್ನಡ ಮಾಧ್ಯಮ) ಮತ್ತು ಸಿದ್ದಾಪುರದ ಪ್ರಶಾಂತಿ ಪ್ರೌಢ ಶಾಲೆಯ ಅನಿರುದ್ಧ (ಆಂಗ್ಲ ಮಾಧ್ಯಮ) ರಾಜ್ಯಕ್ಕೆ ಎರಡನೇ ಸ್ಥಾನ ಗಳಿಸಿರುವುದು, ಅತ್ಯಂತ ಹೆಮ್ಮೆಯ ಸಂಗತಿ. ಇಂತಹ ಅದ್ಭುತ ಸಾಧನೆಗೈದು ಶಿರಸಿ ಶೈಕ್ಷಣಿಕ ಜಿಲ್ಲೆಗೆ ಗೌರವತಂದ ಸನ್ನಿಧಿ ಹೆಗಡೆ ಮತ್ತು ಅಖಿಲಾ ಹೆಗಡೆ, ಮತ್ತು ಅನಿರುದ್ಧ ಇವರಿಗೆ ನನ್ನ ಶುಭ ಹಾರೈಕೆಗಳು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಮಾಡಿದ ಉತ್ತರ ಕನ್ನಡ ಜಿಲ್ಲೆಯ, ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಹಾಗು ಈ ಸಾಧನೆಗೆ ಸಹಕರಿಸಿದ ಶಿಕ್ಷಕ ವರ್ಗ, ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಯ ಎಲ್ಲ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss