Thursday, August 18, 2022

Latest Posts

ಎಸ್ಸೆಸೆಲ್ಸಿ ಪರೀಕ್ಷೆ, ಆನಲೈನ್ ಶಿಕ್ಷಣ ರದ್ದುಗೊಳಿಸಲು ಒತ್ತಾಯಿಸಿ ಜಾಗಟೆ ಬಾರಿಸಿ ಪ್ರತಿಭಟಿಸಿದ ವಾಟಾಳ್ ನಾಗರಾಜ

ಹುಬ್ಬಳ್ಳಿ: ಕೊರೋನಾ ಹಿನ್ನೆಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಹಾಗೂ ಆನ್ಲೈನ್ ಶಿಕ್ಷಣ ರದ್ದುಗೊಳಿಸಬೇಕು ಎಂದು ವಾಟಾಳ್ ನಾಗರಾಜ ಶನಿವಾರ ನಗರದ ಚೆನ್ನಮ್ಮ ವೃತ್ತದಲ್ಲಿ ಜಾಗಟೆ ಬಾರಿಸುವ ಮೂಲಕ ಸರ್ಕಾರವನ್ನು ಒತ್ತಾಯಿಸಿದರು.
ನಂತರ ಮಾತನಾಡಿದ ಅವರು, ಕೊರೋನಾ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ಸರಿಯಲ್ಲ. ಪರೀಕ್ಷೆ ನಡೆಯುವ ದಿನ ರಾಜ್ಯದಲ್ಲಿ 9 ಲಕ್ಷ ವಿದ್ಯಾರ್ಥಿಗಳು, ಸುಮಾರು 2 ಸಾವಿರಕ್ಕೂ ಹೆಚ್ಚು ಶಿಕ್ಷಕರು, 3 ಲಕ್ಷದಷ್ಟು ಪಾಲಕರು ಸೇರಿ ಒಟ್ಟು 15 ಲಕ್ಷ ಜನ ಪರೀಕ್ಷೆಗಾಗಿ ಹೊರಬರುತ್ತಾರೆ. ಇದರಿಂದ ಸಾಮಾಜಿಕ ಅಂತರ ಪಾಲನೆಯಾಗುವುದಿಲ್ಲ. ಪರೀಕ್ಷೆ ನಡೆಸುವುದರಿಂದ ಮತ್ತಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದರು.
ಈಗಾಗಲೇ ತೆಲಂಗಾಣ, ದೆಹಲಿ, ಆಂಧಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ 10 ನೇ ತರಗತಿ ಪರೀಕ್ಷೆ ಇಲ್ಲದೆ ಪಾಸ್ ಮಾಡಿದ್ದಾರೆ. ನಮ್ಮ ರಾಜ್ಯದಲ್ಲೂ ಯಾವುದೇ ಪರೀಕ್ಷೆ ಇಲ್ಲದೇ ಕೊರೊನಾ ಹಿನ್ನೆಲೆ ಎಸ್ಎಸ್ಎಲ್ಸಿ ಪಾಸ್ ಮಾಡಬೇಕು ಎಂದು ಒತ್ತಾಯಿಸಿದರು.
ಇನ್ನೂ ಸಣ್ಣ ಮಕ್ಕಳಿಂದ ಹಿಡಿದು ಪದವಿವರೆಗೂ ಆನ್ಲೈನ್ ಶಿಕ್ಷಣವನ್ನು ನಿಷೇಧ ಮಾಡಬೇಕು. ಹಳ್ಳಿಗಳಲ್ಲಿ ಪಾಲಕರು ಮಕ್ಕಳಿಗೆ ಲ್ಯಾಪಟಾಪ್, ಮೊಬೈಲ್ ಖರೀದಿಸುವಷ್ಟು ಹಣವಿಲ್ಲ. ಆದ್ದರಿಂದ ಆನ್ಲೈನ್ ಶಿಕ್ಷಣ ಬೇಡ ಎಂದರು.
ಕೊರೋನಾ ಪ್ರಕರಣಗಳು ಕಡಿಮೆ ಇದ್ದಾಗ ಲಾಕ್ಡೌನ್ ಮಾಡಿ ಪ್ರಕರಣ ಸಂಖ್ಯೆ ಹೆಚ್ಚಳವಾದಾಗ ಲಾಕ್ ಡೌನ್ ಸಡಿಲಿಕೆ ಮಾಡಿರುವುದು ಸರಿಯಲ್ಲ. ಸರ್ಕಾರ ಕೊರೋನಾವನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!